ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿದ ಸೇವಾ ಹೀ ಪರಮೋಧರ್ಮ ಟ್ರಸ್ಟ್!

Spread the love

ದೊಂಬರಹಟ್ಟಿ ಸರ್ಕಾರಿ ಶಾಲೆಯ ಕೊಠಡಿಗಳಿಗೆ ಹಾಗೂ ಕಾಂಪೌಂಡ್ ಗೋಡೆಗಳಿಗೆ ಉಚಿತವಾಗಿ ಬಣ್ಣ ಮತ್ತು ಚಿತ್ರಕಲೆ ಬಿಡಿಸಿದ ಸೇವಾ ಹೀ ಪರಮೋಧರ್ಮ ತಂಡದವರಿಗೆ ಅಭಿನಂದಿಸಲಾಯಿತು.

ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ವ್ಯಾಪ್ತಿಯ ದೊಂಬರ ಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಬೆಂಗಳೂರಿನ ಸೇವಾ ಹೀ ಪರಮೋಧರ್ಮ ಟ್ರಸ್ಟ್(ರಿ) ವತಿಯಿಂದ,ಶಾಲೆಯ ಕೊಠಡಿಗಳಿಗೆ ಹಾಗೂ ಕಾಂಪೌಂಡ್ ಗೆ ಉಚಿತ ಬಣ್ಣ ,ಚಿತ್ರಕಲೆ ಮಾಡುವುದರ ಮುಖಾಂತರ ಮಾನವೀಯತೆ ಮೆರೆದಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಹಲವಾರು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವುದರ ಮುಖಾಂತರ ಹಾಗೂ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಪರಿಸರ ಜಾಗೃತಿ, ಸರ್ಕಾರಿ ಶಾಲೆಯ ಮಹತ್ವದ ಬಗ್ಗೆ ತಿಳಿಸುತ್ತಾ

ಸರ್ಕಾರಿ ಶಾಲೆಯ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸುತ್ತಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸದಸ್ಯರನ್ನು ಒಳಗೊಂಡಿರುವ ಈ ಟ್ರಸ್ಟ್ ತನು,ಮನ, ದನಗಳನ್ನು ಅರ್ಪಿಸುವ ಮೂಲಕ ಶಾಲೆಯ ಜೀರ್ಣೋದ್ಧಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಈ ನಿಟ್ಟಿನಲ್ಲಿ ನೂರು ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿ ಮಾಡುವದಾಗಿ ಉಪಾಧ್ಯಕ್ಷರಾದ ರವಿಕುಮಾರ್ ಎನ್.ಬಿ.ತಿಳಿಸಿದರು.ಇವರ ಕಾರ್ಯವೈಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಲ್. ಬೋರೇಗೌಡ ಹಾಗೂ ದೊಂಬರಹಟ್ಟಿ ಸಿ.ಆರ್‌.ಪಿ ಯಶೋಧ,ಜಯರಾಮ್ ಹಾಗೂ ಮುಖ್ಯ ಶಿಕ್ಷಕರಾದ ಭವಾನಿ H N, ಸಹ ಶಿಕ್ಷಕರುಗಳು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಲಕ್ಷ್ಮಣ, ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ್ ಸದ್ಯರುಗಳು, ಗ್ರಾಮಸ್ಥರು,ಊರಿನ ಗುರು ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.@publicnewskunigal