ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡು ಆರು ತಿಂಗಳುಗಳು ಕಳೆದರು ಸಹ ನಾಡ ಕಚೇರಿಯ ಕಟ್ಟಡಕ್ಕೆ ಇನ್ನೂ ಸಹ ಉದ್ಘಾಟನೆ ಭಾಗ್ಯ ಕಂಡಿಲ್ಲ 2022/23 ನೇ ಸಾಲಿನ ಸ್ಥಳಿಯ ಶಾಸಕರ ಪ್ರದೇಶಭಿವೃದ್ದಿ ಯೋಜನೆಯಡಿ ಸುಮಾರು 4.50 ಲಕ್ಷ ರೂಪಾಯಿ ವೇಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿತಿ ಕೇಂದ್ರದವರು ಕಟ್ಟಡ ನಿರ್ಮಾಣ ಮಾಡಿ ಕಂದಾಯ ಇಲಾಖೆಗೆ ಅಸ್ತಂತರಿಸಿದ್ದರು ಸಹ ಉದ್ಘಾಟನೆಗೆಕೆ ಮೀನಾ ಮೇಷ ಎಣಿಸಲಾಗುತ್ತಿದೆ ಸಾರ್ವಜನಿಕರ ಪ್ರಶ್ನೆ ಯಾಗಿದೆ
ಹೊಬಳಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಖಾಸಗಿ ಕಚೇರಿಗಳನ್ನು ತೆರೆದು ದರ್ಬಾರ್ ನಡೆಸುತ್ತಿದ್ದರು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿವೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಿಗದೆ ರೈತರು ಕಚೇರಿಗೆ ಅಲೆದಾಡುವಂತಾಗಿದೆ
ಹಲವು ವರ್ಷಗಳಿಂದ ಗ್ರಾಮ ಪಂಚಾಯ್ತಿ ಪಕ್ಕದಲ್ಲಿರುವ ಸ್ತ್ರೀಶಕ್ತಿ ಸಂಘದ ಕಟ್ಟಡದಲ್ಲೆ ನಾಡ ಕಚೇರಿಯು ಕಾರ್ಯ ನಿರ್ವಹಿಸುತ್ತಿದ್ದು ಕಟ್ಟಡದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಇದುವರೆಗೂ ಒಂದು ನಾಮ ಫಲಕವನ್ನು ಸಹ ಅಳವಡಿಸಿಲ್ಲ
ನೂತನ ಕಟ್ಟಡದಲ್ಲಿ ತರಾತುರಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಉಪ ತಹಶೀಲ್ದಾರ್ ರವೀಂದ್ರ ರವರು
ಹುಲಿಯೂರುದುರ್ಗ ಉಪ ತಹಶೀಲ್ದಾರ ರವೀಂದ್ರ ರವರು ನೂತನ ಕಟ್ಟಡದಲ್ಲಿ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೂ ತರದೆ ತರಾತುರಿಯಲ್ಲಿ 2023 ಡಿಸೆಂಬರ್ 4 ರಂದು ಕಾರ್ತಿಕ ಮಾಸದಲ್ಲಿ ನೂತನ ಕಟ್ಟಡದಲ್ಲಿ ಪೂಜೆ ನೆರವೇರಿಸಿ ಬಳಿಕ ಕಟ್ಟಡಕ್ಕೆ ಬೀಗ ಹಾಕಿ ಮೂರು ತಿಂಗಳು ಕಳೆಯುತ್ತಿದೆ ಆದರೆ ನೂತನ ಕಟ್ಟಡ ಉದ್ಘಾಟನೆಯಾಗಿ ಸಾರ್ವಜನಿಕರ ಬಳಕೆಗೆ ಸಿಗದಿರುವುದು ಮಾತ್ರ ವಿಪರ್ಯಾಸವೆ ಸರಿ ಇನ್ನಾದರು ಸಂಬಂದಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ ನಾಡಕಚೇರಿಯನ್ನು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೆಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ @publicnewskunigal