ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು!

Spread the love

ಕುಣಿಗಲ್;-ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಗಳನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಕುಣಿಗಲ್ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ

ಜೆ,ಡಿ,ಎಸ್ ಮುಖಂಡ ಬಿ,ಎನ್ ಜಗದೀಶ್ ನೀಡಿದ ದೂರಿನ ಹಿನ್ನೆಲೆ ಚುನಾವಣೆ ಅಧಿಕಾರಿಗಳು ಕುಣಿಗಲ್ ಪಟ್ಟಣದ 22 ನೇ ವಾರ್ಡ್ ನ ಮಲ್ಲಿಪಾಳ್ಯದ ಬೆಟ್ಟಸ್ವಾಮಿ ಎಂಬಾತನಿಗೆ ಸೇರಿದ ಗೋದಾಮಿನಲ್ಲಿ ಸಂಗ್ರಹ ಮಾಡಿದ್ದ ಸೂಮಾರು 80 ಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಂಸದ ಡಿ.ಕೆ ಸುರೇಶ್, ಶಾಸಕ ಡಾ.ರಂಗನಾಥ್ ಭಾವಚಿತ್ರವಿರುವ ಕುಕ್ಕರ್ ಬಾಕ್ಸ್. ಟಿಸಿ ರಿಪೇರಿ ಮಾಡುವ ಗೋದಾಮಿನಲ್ಲಿ ಇಟ್ಟಿದ್ದ ಕುಕ್ಕರ್ ಬಾಕ್ಸ್ ಗಳು,

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್ ಪಟ್ಟಣ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರವಾಗಿ ಬೆಂಬಲಿಗರು ಹಂಚಲು ಕುಕ್ಕರ್ ಗಳನ್ನು ಗೋದಾಮಿನಲ್ಲಿ ಇರಿಸಿದ್ದ ಆರೋಪ

ಕುಕ್ಕರ್ ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಚುನಾವಣಾಧಿಕಾರಿಗಳು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು @publicnewskunigal