ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವ!

Spread the love

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವ!

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವದ ಪ್ರಯುಕ್ತ ಸೋಮವಾರ ಉಜ್ಜನಿ,ನಿಡಸಾಲೆ,ಬಿ.ಜಿ ಕೊಪ್ಪಲು,ಕಾಡುಬೋರನಹಳ್ಳಿ,ದೇವೇಂದ್ರ ಹಾಗೂ ಎಲೆಕಡಕಲು ಗ್ರಾಮಸ್ಥರು ಆರತಿ ಉತ್ಸವವನ್ನು ನೆರವೇರಿಸಿದರು ಮಂಗಳವಾರ ಮಧ್ಯಾಹ್ನ ಸುತ್ತಮುತ್ತಲ ಗ್ರಾಮದ ಭಕ್ತರು ತಮ್ಮ ಎತ್ತಿನ ಗಾಡಿಗಳಿಗೆ ಸಿಂಗರಿಸಿ ಸೌದೆ ತುಂಬಿ ತಂದು ದೇವಾಲಯದ ಸುತ್ತಲು ಪ್ರದಕ್ಷಣೆ ಹಾಕಿ ಅಗ್ನಿಕೊಂಡಕ್ಕೆ ಸೌದೆ ಸಮರ್ಪಿಸಿದರು ಸಂಜೆ ಆರು ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಗಳ ಮೂಲಕ ಪೂಜೆ ಸಲ್ಲಿಸಿ ಕೊಂಡದ ಸೌದೆಗೆ ಅಗ್ನಿ ಸ್ಪರ್ಶ ಮಾಡಲಾಯಿತು

ಇನ್ನೂ ಸಂಜೆ ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್,ವರ್ತೂರು ಸಂತೊಷ್,ಹಾಗೂ ಗಿಚ್ಚಿ ಗಿಲಿಗಿಲಿಯ ಜಗ್ಗಪ್ಪ ಸೆರಿದಂತೆ ಹಲವು ಕಲಾವಿದರು ಸಂಗಿತ ರಸಸಂಜೆ ಕಾರ್ಯಕ್ರಮ ಹಾಗೂ ಹಾಸ್ಯ (ಕಾಮಿಡಿ) ಷೋ ನಡೆಸಿಕೊಟ್ಟರು ಬುಧವಾರ ಬೆಳಗ್ಗೆ ಉಜ್ಜನಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ಹಾಗೂ ಶ್ರೀ ಹೆಬ್ಬಾರಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ದೇವಾಲಯದ ಮುಂಭಾಗ ಕರೆತಂದು ಕೊಂಡ ಹಾಯಲಾಯಿತು ಶ್ರೀ ಉಜ್ಜನಿ ಚೌಡೇಶ್ವರಿ ಅಮ್ಮನವರ ಅಗ್ನಿಕೊಂಡೋತ್ಸವಕ್ಕೆ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಸಾಕ್ಷಿಯಾಗಿ ಕೋಂಡೊತ್ಸವವನ್ನು ಕಣ್ತುಂಬಿಕೊಂಡು ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು ಸಂಜೆ ಐದು ಗಂಟೆಗೆ ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ರಥಕ್ಕೆ ಹಣ್ಣು ಧವನ ತೂರಿದರು

ಎಂಟುನೂರು ವರ್ಷಗಳ ಇತಿಹಾಸ ಹೊಂದಿರುವ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವ ಕ್ಕೂ ಮುನ್ನ ದಲಿತರು ಜನಿವಾರ ಧರಿಸಿ ಬ್ರಾಹ್ಮಣರಾಗಿ ಹದಿನೈದು ದಿನಗಳ ಕಾಲ ಕಠಿಣ ವ್ರತವನ್ನು ಆಚರಿಸಿ ಶ್ರೀ ಹೆಬ್ಬಾರಮ್ಮದೇವಿ ಹಾಗೂ ಚೌಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಬಳಿಕ ಕೊಂಡ ಹಾಯುವುದು ಇಲ್ಲಿ ಪ್ರತಿತಿಯಾಗಿದೆ ಜಾತ್ರಮಹೊತ್ಸವದ ವೇಳೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು ಈ ವೇಳೆ ಅಮೃತೂರು ವೃತ್ತ ನಿರೀಕ್ಷಕ ಮಧ್ಯನಾಯಕ್,ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್,ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಉಪಸ್ಥಿತರಿದ್ದರು @publicnewskunigal