ಬರಿದಾದದ ಶಿಂಷಾನದಿ ಒಡಲು ಜೀವಜಲಕ್ಕೆ ಆಹಾಕಾರ ನದಿ ಪಾತ್ರದ ನೀರನ್ನು ನಂಬಿದ್ದ ರೈತರು ಕಂಗಾಲು!

Spread the love

ಕುಣಿಗಲ್‌ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯಲ್ಲಿ ಹರಿಯುವ ಶಿಂಷಾವದಿ ಒಡಲು ಈ ವರ್ಷ ಸಂಪೂರ್ಣವಾಗಿ ಬತ್ತಿದ್ದು ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ ಹುಲಿಯೂರುದುರ್ಗ ಪಟ್ಟಣ ಹಾಗೂ ಶೃಂಗಾರಸಾಗರ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಲ್ಲಿ 2001 ರಲ್ಲಿ ಕೋಡವತ್ತಿ ಗ್ರಾಮದ ಬಳಿ ಹರಿಯುವ ಶಿಂಷಾನದಿಗೆ ಅಡ್ಡಲಾಗಿ ಬ್ಯಾರೆಜ್ ಹಾಗೂ ಪಂಪ್‌ ಹೌಸ್‌ ನಿರ್ಮಿಸಿ ಏತನೀರಾವರಿಯ ಮೂಲಕ ನೀರನ್ನು ತಂದು ನಿಂಗಿಕೊಪ್ಪಲು ಗ್ರಾಮದ ಬಳಿ ಶುದ್ದಿಕರಿಸಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲಾಗುತಿತ್ತು ಆದರೆ ಕಳೆದ ವರ್ಷ ಮಳೆಯ ಕೊರತೆಯ ಕಾರಣದಿಂದಾಗಿ ಐದು ತಿಂಗಳುಗಳಿಂದ ಶಿಂಷಾನದಿಯಲ್ಲಿ ನೀರು ಇಲ್ಲದಂತಾಗಿದೆ
ಹುಲಿಯೂರುದುರ್ಗ ಪಟ್ಟಣದಲ್ಲಿ 10 ರಿಂದ 12 ಸಾವಿರ ಜನಸಂಖ್ಯೆ ವಾಸಿಸುತ್ತಿದ್ದು 15 ಕೋಳವೆ ಬಾವಿಗಳ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ ಆದರೆ ಕೋಳವೆಬಾವಿಗಳಲ್ಲಿ ನೀರಿನ ಮಟ್ಟ ದಿನೆ ದಿನೆ ಕುಸಿಯುತ್ತಿದ್ದು ಕುಡಿಯುವ ನೀರಿನ ಬವಣೆ ಹೆಚ್ಚುತ್ತಿದ್ದು ಇತ್ತಿಚೆಗೆ ಎರಡು ಕೋಳವೆ ಬಾವಿಗಳನ್ನು ಕೊರೆಯಲಾಗಿದೆ ಆದರೆ ಎಂಟುನೂರು ಅಡಿ ಕೊರೆದರು ಸಹ ನೀರು ಮಾತ್ರ ಸಿಕ್ಕಿಲ್ಲ ಇನ್ನೂ ಪಟ್ಟಣದ ಹಲವು ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ಹುಲಿಯೂರುದುರ್ಗ ಪಟ್ಟಣದಲ್ಲಿ ಬಳಸುತ್ತಿರುವ ನೀರು ಉಪ್ಪು ನೀರಾಗಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ

ಪಟ್ಟಣದಲ್ಲಿ ನಾಲ್ಕು ಶುದ್ದ ಕುಡಿಯುವ ನೀರಿನ ಘಟಕಗಳಿದ್ದು ಖಾಸಗಿಯವರು ನಿರ್ವಹಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದಂತಗಿದೆ ಅದರಲ್ಲಿ ಒಂದು ಘಟಕ ಕೆಟ್ಟುನಿಂತು ವರ್ಷಗಳೆ ಕಳೆದಿದೆ ಅದನ್ನು ಇದುವರೆಗೆ ಸರಿಪಡಿಸಿಲ್ಲ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಕಳೆದ ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳು ಜಿಲ್ಲಾಪಂಚಾಯ್ತಿ ಸಿಇಒ ಹಾಗೂ ಹೇಮಾವತಿ ನಾಲಾ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಕುಡಿಯುವ ನೀರಿಗಾಗಿ ಮಾರ್ಕೋನಹಳ್ಳಿ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಹುಲಿಯೂರುದುರ್ಗ ಗ್ರಾಮ ಪಂಚಾಯ್ತಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು

ಆದರೆ ಮಾರ್ಕೋನಹಳ್ಳಿ ಜಲಾಶಯದಲ್ಲಿ ಬೀಸಿಲ ತಾಪಕ್ಕೆ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಕಾರಣ ಪ್ರಸ್ತುತ ಬಳಕೆಗೆ ಇರುವ 828 MCFT ನೀರನ್ನು ಜಲಾಶಯದಿಂದ ನದಿಗೆ ಹರಿಸಿದರೆ ಮರಳುಗಾಡಿನಂತಿರುವ ನದಿಯಲ್ಲಿರುವ ಹಳ್ಳ ಗುಂಡಿಗಳಲ್ಲಿ ನೀರು ಹಿರಿಕೊಳ್ಳುವ ಕಾರಣ ಜಲಾಶಯದಿಂದ ನೀರು ಬಿಟ್ಟರು ತಲ ತಲುಪುವುದಿಲ್ಲ ಎಂದು ಹೇಮಾವತಿ ಅಧಿಕಾರಿಗಳು ತಿಳಿಸಿದ್ದಾರೆ ಪ್ರಸ್ತುತ ಮಾರ್ಕೋನಹಳ್ಳಿ ಜಲಾಶಯದಲ್ಲಿ 1038 ಎಂ,ಸಿ,ಎಫ್,ಟಿ (1.38 tmc) ನೀರಿದ್ದು ಪ್ರಸ್ತುತ ಬಳಕೆಗೆ ಮಾರ್ಕೋನಹಳ್ಳಿ ಜಲಾಶಯದಿಂದ ಹಿನ್ನಿರಾಗಿ ಹರಿಯುವ ಶಿಂಷಾನದಿಯ ಒಡಲು ಬರಿದಾಗಿ ಐದು ತಿಂಗಳು ಕಳೆದಿದೆ ಹನಿ ಹನಿ ನೀರಿಗೂ ಈ ಭಾಗದ ರೈತರು ಪರಿತಪಿಸುವಂತಾಗಿದೆ ಎಂಟು ವರ್ಷಗಳ ಬಳಿಕ ಶಿಂಷಾ ನದಿ ಸಂಪೂರ್ಣವಾಗಿ ಬತ್ತಿದ್ದು ನದಿಯ ನೀರನ್ನೆ ನಂಬಿ ಬೇಳೆ ಬೆಳೆಯುತ್ತಿದ್ದ 30 ಕೀಮಿ ವ್ಯಾಪ್ತಿಯ ನದಿ ಪಾತ್ರಾದ ಸಾವಿರಾರು ಮಂದಿ ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ ನದಿಯುದ್ದಕ್ಕೂ ರೈತರು ನೀರಿಗಾಗಿ ಇಪ್ಪತ್ತು ಅಡಿಗಳವರೆಗೆ ಗುಂಡಿ ಬಗೆದರು ಹನಿ ನೀರು ಸಿಗದಂತಾಗಿದೆ ಪ್ರತಿ ವರ್ಷ ಎರಡರಿಂದ ಮೂರು ಬೇಳೆ ಬೇಳೆಯುತ್ತಿದ್ದ ಈ ಭಾಗದ ರೈತರು ನದಿಯಲ್ಲಿ ನೀರಿಲ್ಲದೆ ಕಂಗಾಲಾಗಿದ್ದಾರೆ ತೆಂಗು ಅಡಿಕೆ ಬಾಳೆ ಕಬ್ಬು ಸೆರಿದಂತೆ ಈ ಭಾಗದಲ್ಲಿ ಬೆಳೆಯುವ ಹಲವು ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.
ಹಲವು ವರ್ಷಗಳ ಬಳಿಕ ಬರಛಾಯೆ ಅವರಿಸಿದೆ ಕಳೆದ ವರ್ಷ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು ಹಾಗೂ ಮೇ ತಿಂಗಳು ಬಂದರು ಇನ್ನೂ ಮಳೆಯಾಗದ ಕಾರಣದಿಂದಾಗಿ ಹೈನುಗಾರಿಕೆಯನ್ನು ನಂಬಿದ್ದ ಈ ಭಾಗದ ರೈತರ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ

ಬರದ ಹಿನ್ನೆಲೆ ಮಳೆಯ ಕೊರತೆಯ ಕಾರಣದಿಂದ ತಾಲ್ಲೂಕಿನಲ್ಲಿ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ನೂರಾರು ಕೊಳವೆಬಾವಿಗಳು ಇಗಾಗಲೆ ನೀರಿಲ್ಲದೆ ಬತ್ತಿವೆ ಕೆರೆ ಕುಂಟೆಗಳು ನೀರಿಲ್ಲದೆ ಒಣಗಿವೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ಕೂಡಲೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕುಣಿಗಲ್ ತಾಲ್ಲೂಕಿನಲ್ಲಿ ಮೇವಿನ ಕೇಂದ್ರ ತೆರೆದು ರೈತರ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕು ನೀರಿನ ತೊಟ್ಟಿ ನಿರ್ಮಿಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು

  • ಯೋಗೇಶ್ ಗೌಡ, ಕರ್ನಾಟಕ ರಾಜ್ಯ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ

ಹುಲಿಯೂರುದುರ್ಗ ಪಟ್ಟಣಕ್ಕೆ ಶಿಂಷಾನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು ಆದರೆ ಮಳೆಯ ಕೊರತೆ ಕಾರಣದಿಂದ ನದಿಯಲ್ಲಿ ನೀರಿಲ್ಲದೆ ಕಳೆದ ಐದು ತಿಂಗಳುಗಳಿಂದ ಕೋಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ ಮಳೆಯ ಕೊರತೆಯ ಕಾರಣದಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ಪಟ್ಟಣದ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ

– ಶ್ರೀಧರ್, ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಪಿ.ಡಿ.ಒ

ಶಿಂಷಾನದಿಯಲ್ಲಿ ನೀರು ಇಲ್ಲದ ಕಾರಣ ಎಂಟು ವರ್ಷದ ಬಳಿಕ ಹುಲಿಯೂರುದುರ್ಗ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ
ಹೊಸದಾಗಿ ಎರಡು ಕೊಳವೆ ಬಾವಿ ಕೊರೆಯಲಾಗಿತ್ತು ಎಂಟುನೂರು ಅಡಿ ಕೊರೆದರು ನೀರು ಮಾತ್ರ ಸಿಕ್ಕಿಲ್ಲ ಕಳೆದೊಂದು ವರ್ಷದಿಂದ ಮಳೆಯ ಕೊರತೆ ಕಾರಣದಿಂದ ಎಲ್ಲೆಡೆ ಬರ ತಾಂಡವವಾಡುತ್ತಿದ್ದು ಹುಲಿಯೂರುದುರ್ಗ ಪಟ್ಟಣದ ನಾಗರೀಕರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದ್ದು ಸದ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ

– ನಾಗೇಶ್ ಗ್ರಾಮ ಪಂಚಾಯ್ತಿ ಸದಸ್ಯರು ಹುಲಿಯೂರುದುರ್ಗ