Skip to content
July 22, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2024
  • May
  • ಬರಿದಾದದ ಶಿಂಷಾನದಿ ಒಡಲು ಜೀವಜಲಕ್ಕೆ ಆಹಾಕಾರ ನದಿ ಪಾತ್ರದ ನೀರನ್ನು ನಂಬಿದ್ದ ರೈತರು ಕಂಗಾಲು!
  • Daily news

ಬರಿದಾದದ ಶಿಂಷಾನದಿ ಒಡಲು ಜೀವಜಲಕ್ಕೆ ಆಹಾಕಾರ ನದಿ ಪಾತ್ರದ ನೀರನ್ನು ನಂಬಿದ್ದ ರೈತರು ಕಂಗಾಲು!

Publicnewskunigal May 10, 2024 (Last updated: May 10, 2024) 1 minute read
WhatsApp-Image-2024-05-10-at-9.07.33-AM
Spread the love

ಕುಣಿಗಲ್‌ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯಲ್ಲಿ ಹರಿಯುವ ಶಿಂಷಾವದಿ ಒಡಲು ಈ ವರ್ಷ ಸಂಪೂರ್ಣವಾಗಿ ಬತ್ತಿದ್ದು ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ ಹುಲಿಯೂರುದುರ್ಗ ಪಟ್ಟಣ ಹಾಗೂ ಶೃಂಗಾರಸಾಗರ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಲ್ಲಿ 2001 ರಲ್ಲಿ ಕೋಡವತ್ತಿ ಗ್ರಾಮದ ಬಳಿ ಹರಿಯುವ ಶಿಂಷಾನದಿಗೆ ಅಡ್ಡಲಾಗಿ ಬ್ಯಾರೆಜ್ ಹಾಗೂ ಪಂಪ್‌ ಹೌಸ್‌ ನಿರ್ಮಿಸಿ ಏತನೀರಾವರಿಯ ಮೂಲಕ ನೀರನ್ನು ತಂದು ನಿಂಗಿಕೊಪ್ಪಲು ಗ್ರಾಮದ ಬಳಿ ಶುದ್ದಿಕರಿಸಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲಾಗುತಿತ್ತು ಆದರೆ ಕಳೆದ ವರ್ಷ ಮಳೆಯ ಕೊರತೆಯ ಕಾರಣದಿಂದಾಗಿ ಐದು ತಿಂಗಳುಗಳಿಂದ ಶಿಂಷಾನದಿಯಲ್ಲಿ ನೀರು ಇಲ್ಲದಂತಾಗಿದೆ
ಹುಲಿಯೂರುದುರ್ಗ ಪಟ್ಟಣದಲ್ಲಿ 10 ರಿಂದ 12 ಸಾವಿರ ಜನಸಂಖ್ಯೆ ವಾಸಿಸುತ್ತಿದ್ದು 15 ಕೋಳವೆ ಬಾವಿಗಳ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ ಆದರೆ ಕೋಳವೆಬಾವಿಗಳಲ್ಲಿ ನೀರಿನ ಮಟ್ಟ ದಿನೆ ದಿನೆ ಕುಸಿಯುತ್ತಿದ್ದು ಕುಡಿಯುವ ನೀರಿನ ಬವಣೆ ಹೆಚ್ಚುತ್ತಿದ್ದು ಇತ್ತಿಚೆಗೆ ಎರಡು ಕೋಳವೆ ಬಾವಿಗಳನ್ನು ಕೊರೆಯಲಾಗಿದೆ ಆದರೆ ಎಂಟುನೂರು ಅಡಿ ಕೊರೆದರು ಸಹ ನೀರು ಮಾತ್ರ ಸಿಕ್ಕಿಲ್ಲ ಇನ್ನೂ ಪಟ್ಟಣದ ಹಲವು ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ಹುಲಿಯೂರುದುರ್ಗ ಪಟ್ಟಣದಲ್ಲಿ ಬಳಸುತ್ತಿರುವ ನೀರು ಉಪ್ಪು ನೀರಾಗಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ

ಪಟ್ಟಣದಲ್ಲಿ ನಾಲ್ಕು ಶುದ್ದ ಕುಡಿಯುವ ನೀರಿನ ಘಟಕಗಳಿದ್ದು ಖಾಸಗಿಯವರು ನಿರ್ವಹಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದಂತಗಿದೆ ಅದರಲ್ಲಿ ಒಂದು ಘಟಕ ಕೆಟ್ಟುನಿಂತು ವರ್ಷಗಳೆ ಕಳೆದಿದೆ ಅದನ್ನು ಇದುವರೆಗೆ ಸರಿಪಡಿಸಿಲ್ಲ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಕಳೆದ ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳು ಜಿಲ್ಲಾಪಂಚಾಯ್ತಿ ಸಿಇಒ ಹಾಗೂ ಹೇಮಾವತಿ ನಾಲಾ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಕುಡಿಯುವ ನೀರಿಗಾಗಿ ಮಾರ್ಕೋನಹಳ್ಳಿ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಹುಲಿಯೂರುದುರ್ಗ ಗ್ರಾಮ ಪಂಚಾಯ್ತಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು

ಆದರೆ ಮಾರ್ಕೋನಹಳ್ಳಿ ಜಲಾಶಯದಲ್ಲಿ ಬೀಸಿಲ ತಾಪಕ್ಕೆ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಕಾರಣ ಪ್ರಸ್ತುತ ಬಳಕೆಗೆ ಇರುವ 828 MCFT ನೀರನ್ನು ಜಲಾಶಯದಿಂದ ನದಿಗೆ ಹರಿಸಿದರೆ ಮರಳುಗಾಡಿನಂತಿರುವ ನದಿಯಲ್ಲಿರುವ ಹಳ್ಳ ಗುಂಡಿಗಳಲ್ಲಿ ನೀರು ಹಿರಿಕೊಳ್ಳುವ ಕಾರಣ ಜಲಾಶಯದಿಂದ ನೀರು ಬಿಟ್ಟರು ತಲ ತಲುಪುವುದಿಲ್ಲ ಎಂದು ಹೇಮಾವತಿ ಅಧಿಕಾರಿಗಳು ತಿಳಿಸಿದ್ದಾರೆ ಪ್ರಸ್ತುತ ಮಾರ್ಕೋನಹಳ್ಳಿ ಜಲಾಶಯದಲ್ಲಿ 1038 ಎಂ,ಸಿ,ಎಫ್,ಟಿ (1.38 tmc) ನೀರಿದ್ದು ಪ್ರಸ್ತುತ ಬಳಕೆಗೆ ಮಾರ್ಕೋನಹಳ್ಳಿ ಜಲಾಶಯದಿಂದ ಹಿನ್ನಿರಾಗಿ ಹರಿಯುವ ಶಿಂಷಾನದಿಯ ಒಡಲು ಬರಿದಾಗಿ ಐದು ತಿಂಗಳು ಕಳೆದಿದೆ ಹನಿ ಹನಿ ನೀರಿಗೂ ಈ ಭಾಗದ ರೈತರು ಪರಿತಪಿಸುವಂತಾಗಿದೆ ಎಂಟು ವರ್ಷಗಳ ಬಳಿಕ ಶಿಂಷಾ ನದಿ ಸಂಪೂರ್ಣವಾಗಿ ಬತ್ತಿದ್ದು ನದಿಯ ನೀರನ್ನೆ ನಂಬಿ ಬೇಳೆ ಬೆಳೆಯುತ್ತಿದ್ದ 30 ಕೀಮಿ ವ್ಯಾಪ್ತಿಯ ನದಿ ಪಾತ್ರಾದ ಸಾವಿರಾರು ಮಂದಿ ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ ನದಿಯುದ್ದಕ್ಕೂ ರೈತರು ನೀರಿಗಾಗಿ ಇಪ್ಪತ್ತು ಅಡಿಗಳವರೆಗೆ ಗುಂಡಿ ಬಗೆದರು ಹನಿ ನೀರು ಸಿಗದಂತಾಗಿದೆ ಪ್ರತಿ ವರ್ಷ ಎರಡರಿಂದ ಮೂರು ಬೇಳೆ ಬೇಳೆಯುತ್ತಿದ್ದ ಈ ಭಾಗದ ರೈತರು ನದಿಯಲ್ಲಿ ನೀರಿಲ್ಲದೆ ಕಂಗಾಲಾಗಿದ್ದಾರೆ ತೆಂಗು ಅಡಿಕೆ ಬಾಳೆ ಕಬ್ಬು ಸೆರಿದಂತೆ ಈ ಭಾಗದಲ್ಲಿ ಬೆಳೆಯುವ ಹಲವು ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.
ಹಲವು ವರ್ಷಗಳ ಬಳಿಕ ಬರಛಾಯೆ ಅವರಿಸಿದೆ ಕಳೆದ ವರ್ಷ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು ಹಾಗೂ ಮೇ ತಿಂಗಳು ಬಂದರು ಇನ್ನೂ ಮಳೆಯಾಗದ ಕಾರಣದಿಂದಾಗಿ ಹೈನುಗಾರಿಕೆಯನ್ನು ನಂಬಿದ್ದ ಈ ಭಾಗದ ರೈತರ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ

ಬರದ ಹಿನ್ನೆಲೆ ಮಳೆಯ ಕೊರತೆಯ ಕಾರಣದಿಂದ ತಾಲ್ಲೂಕಿನಲ್ಲಿ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ನೂರಾರು ಕೊಳವೆಬಾವಿಗಳು ಇಗಾಗಲೆ ನೀರಿಲ್ಲದೆ ಬತ್ತಿವೆ ಕೆರೆ ಕುಂಟೆಗಳು ನೀರಿಲ್ಲದೆ ಒಣಗಿವೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ಕೂಡಲೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕುಣಿಗಲ್ ತಾಲ್ಲೂಕಿನಲ್ಲಿ ಮೇವಿನ ಕೇಂದ್ರ ತೆರೆದು ರೈತರ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕು ನೀರಿನ ತೊಟ್ಟಿ ನಿರ್ಮಿಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು

  • ಯೋಗೇಶ್ ಗೌಡ, ಕರ್ನಾಟಕ ರಾಜ್ಯ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ

ಹುಲಿಯೂರುದುರ್ಗ ಪಟ್ಟಣಕ್ಕೆ ಶಿಂಷಾನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು ಆದರೆ ಮಳೆಯ ಕೊರತೆ ಕಾರಣದಿಂದ ನದಿಯಲ್ಲಿ ನೀರಿಲ್ಲದೆ ಕಳೆದ ಐದು ತಿಂಗಳುಗಳಿಂದ ಕೋಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ ಮಳೆಯ ಕೊರತೆಯ ಕಾರಣದಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ಪಟ್ಟಣದ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ

– ಶ್ರೀಧರ್, ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಪಿ.ಡಿ.ಒ

ಶಿಂಷಾನದಿಯಲ್ಲಿ ನೀರು ಇಲ್ಲದ ಕಾರಣ ಎಂಟು ವರ್ಷದ ಬಳಿಕ ಹುಲಿಯೂರುದುರ್ಗ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ
ಹೊಸದಾಗಿ ಎರಡು ಕೊಳವೆ ಬಾವಿ ಕೊರೆಯಲಾಗಿತ್ತು ಎಂಟುನೂರು ಅಡಿ ಕೊರೆದರು ನೀರು ಮಾತ್ರ ಸಿಕ್ಕಿಲ್ಲ ಕಳೆದೊಂದು ವರ್ಷದಿಂದ ಮಳೆಯ ಕೊರತೆ ಕಾರಣದಿಂದ ಎಲ್ಲೆಡೆ ಬರ ತಾಂಡವವಾಡುತ್ತಿದ್ದು ಹುಲಿಯೂರುದುರ್ಗ ಪಟ್ಟಣದ ನಾಗರೀಕರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದ್ದು ಸದ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ

– ನಾಗೇಶ್ ಗ್ರಾಮ ಪಂಚಾಯ್ತಿ ಸದಸ್ಯರು ಹುಲಿಯೂರುದುರ್ಗ

About the Author

Publicnewskunigal

Administrator

View All Posts
Post Views: 1,074

Related

Post navigation

Previous: ಪಟ್ಟಣದ ಏಳನೇ ವಾರ್ಡ್ ನ ಪುರಸಭೆಯ ಸದಸ್ಯ ಸಮೀವಲ್ಲಾ ಸದಸ್ಯತ್ವ ರದ್ದುಗೊಳಿಸಿ ನ್ಯಾಯಾಲಯ ಆದೇಶ!
Next: ಹುಲಿಯೂರುದುರ್ಗ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸಲು ತಹಶೀಲ್ದಾರ್ ವಿಶ್ವನಾಥ್ ಚಾಲನೆ!

Related Stories

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
VideoCapture_20260511-193934
  • Daily news
  • KUNIGAL
  • MLA
  • TUMKUR

ಕನ್ನಗುಣಿ ಗ್ರಾಮದ ರಂಗೇಗೌಡ (ದೀಪು) ನಿಧನ!

Publicnewskunigal May 11, 2026
VideoCapture_20260310-220849
  • Daily news
  • KUNIGAL
  • State
  • TUMKUR

ಸಂತೆಪೇಟೆ ಗ್ರಾಮದಲ್ಲಿ ಮಾರ್ಚಿ 18 ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನ ಸಂಪರ್ಕ ಸಭೆ!

Publicnewskunigal March 11, 2026

Recent Posts

  • ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!
  • ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!
  • ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!
  • ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!
  • ಕರ್ತವ್ಯಕ್ಕೆ ತೆರಳುತಿದ್ದ ವೇಳೆ ರಸ್ತೆ ಅಪಘಾತ ಗ್ರಾಮ ಆಡಳಿತ ಅಧಿಕಾರಿ ಸಾವು!

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Farmers
  • FOREST
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0
20230611_133111
  • Farmers
  • KUNIGAL
  • State
  • TUMKUR

ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!

Publicnewskunigal July 10, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.