ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಗುಣಿ ಗ್ರಾಮದ ರಂಗೇಗೌಡ (ದೀಪು) ಖಾಸಗಿ ಆಸ್ಪತ್ರೆಯಲ್ಲಿ ನಿಧನ!
ಕುಣಿಗಲ್: ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಡಿ.ನಾಗರಾಜಯ್ಯ ಅವರ ಸಹೋದರ ದಿ. ರಂಗಸ್ವಾಮಿ ರವರ ಏಕೈಕ ಪುತ್ರ ರಂಗೇಗೌಡ(ದೀಪು) ಸೋಮವಾರ ನಿಧನರಾದರು.ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಂಗೇಗೌಡ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಮೃತರಿಗೆ 41 ವರ್ಷ ವಯಸ್ಸಾಗಿತ್ತು. ಇವರಿಗೆ ತಾಯಿ ಕಮಲ, ನಾಲ್ವರು ಸಹೋದರಿಯರಿದ್ದಾರೆ. ಸ್ವಗ್ರಾಮ ಕುಣಿಗಲ್ ತಾಲ್ಲೂಕಿನ ಕನ್ನಗುಣಿ ಗ್ರಾಮದಲ್ಲಿ ಸಂಜೆ ಸಹಸ್ರಾರು ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.ದೊಡ್ಡಪ್ಪ ಡಿ.ನಾಗರಾಜಯ್ಯ, ಚಿಕ್ಕಪ್ಪಂದಿರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಶಿವಣ್ಣ, ತುಮುಲ್ ನಿರ್ದೇಶಕರೂ ಆದ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಅಣ್ಣಂದಿರಾದ ಜೆಡಿಎಸ್ ನ ಡಾ.ರವಿಬಾಬು, ಬಿ.ಎನ್. ಜಗದೀಶ್ ನಾಗರಾಜಯ್ಯ, ಪ್ರಮೋದ್ ಶಿವಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್.ಲೋಕೇಶ್ ಸೇರಿದಂತೆ ಅಪಾರ ಬಂಧು ಬಳಗ ಕಂಬನಿ ಮಿಡಿದಿದ್ದಾರೆ.ಮಾಜಿ ಶಾಸಕರಾದ ಎಚ್.ನಿಂಗಪ್ಪ, ಬಿ.ಬಿ.ರಾಮಸ್ವಾಮಿ ಗೌಡ, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್ ಸೇರಿದಂತೆ ಸಹಸ್ರಾರು ಜನರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.@publicnewskunigal