ರಾಜ್ಯ ಹೆದ್ದಾರಿ 33ರ ಹೊನ್ನೆನಹಳ್ಳಿ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮಂಡ್ಯ ಮೂಲದ ನಾಲ್ವರು ಸ್ಥಳದಲ್ಲಿ ಸಾವು!
ಕುಣಿಗಲ್ ತಾಲ್ಲೂಕಿನ ರಾಜ್ಯ ಹೆದ್ದಾರಿ 33ರ ಹೊನ್ನೆನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಮಂಡ್ಯ ಜಿಲ್ಲೆಯ ಸ್ವರ್ಣನಗರದ ನಿವಾಸಿಗಳಾದ ಗಾಯಿತ್ರಿ (ಶುಭ)(60) ಕುಮಾರ್ ನರಸಿಂಹಮೂರ್ತಿ (65) ದಂಪತಿ ಸಹೊದರಿ ಕೆ.ಆರ್ ಗಾಯಿತ್ರಿ (60) ಮೈಸೂರು ಮೂಲದ ಕಾರು ಚಾಲಕ ರಘುಕುಮಾರ್(56) ಮೃತದುರ್ದೈವಿಗಳು ಗಾಯಿತ್ರಿ ಮತ್ತು ಕುಮಾರ್ ನರಸಿಂಹಮೂರ್ತಿ ರವರ ಇಪ್ಪತೈದನೆ ವರ್ಷದ ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶನಿವಾರ ಮಂಡ್ಯದಿಂದ ತುಮಕೂರಿನ ದೇವರಾಯನದುರ್ಗದ ಯೋಗನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಮಂಡ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಕುಣಿಗಲ್ ತಾಲ್ಲೂಕಿನ ರಾಜ್ಯ ಹೆದ್ದಾರೀ 33ರ ಹೊನ್ನೆನಹಳ್ಳಿ ಸಮೀಪ ಮುಂಬದಿಯ ವಾಹನವನ್ನು ಹಿಂದಿಕ್ಕೂವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಲಾರಿ ಕಾರಿನ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಸ್ಥಳಕ್ಕೆ ಕುಣಿಗಲ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಿಯರ ನೆರವಿನಿಂದ ಮೃತದೇಹಗಳನ್ನು ಹೊರ ತೆಗೆದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ,ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ನೂ ಮೂರು ದಿನಗಳ ಅಂತರದಲ್ಲಿ ಏಳು ಮಂದಿ ಇದೆ ರಸ್ತೆಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿರುವುದು ಚರ್ಚೆಗೆ ಗ್ರಾಸವಾಗಿದೆ ಕೆಶಿಫ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣ ಅಪಘಾತ ವಲಯ ಗುರುತಿಸಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ,ಇತ್ತಿಚೇಗೆ ಶಾಸಕ ಡಾ.ರಂಗನಾಥ ಸಹ ಅಧಿಕಾರಿಗಳಿಗೆ ಅಪಘಾತ ವಲಯದಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಇಪ್ಪತ್ತನಾಲ್ಕು ಗಂಟೆ ಕಳೆದಿಲ್ಲಿ ಮತ್ತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ, ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂಜಾಗ್ರತ ಕ್ರಮ ಕೈಗೊಂಡು ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ @publicnewskunigal