ಪ್ರಸಕ್ತ ಸಾಲಿನ ರೈತರು ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್ ಮನವಿ ಮಾಡಿದ್ದಾರೆ!
ಕುಣಿಗಲ್ ತಾಲೂಕಿನಾದ್ಯಂತ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ತಾಲೂಕಿನ ಪ್ರಮುಖ ಬೆಳೆಯಾದ ರಾಗಿ (ಮಳೆ ಆಶ್ರಿತ) ಸೇರಿದಂತೆ ಇತರೆ ಮುಂಗಾರು ಬೆಳೆಗಳಿಗೆ ರೈತರು ಕಡ್ಡಾಯವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕುಣಿಗಲ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ರಂಗನಾಥ್ ಆರ್. ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.ರಾಗಿ ಬೆಳೆಗೆ ಕೊನೆಯ ದಿನಾಂಕ ಮುಂಗಾರು ಹಂಗಾಮಿನ ಮಳೆ ಆಶ್ರಿತ ರಾಗಿ ಬೆಳೆಯ ವಿಮೆ ನೋಂದಣಿಗೆ ಆಗಸ್ಟ್ 14, 2026 ರವರೆಗೆ ಕೊನೆಯ ಕಾಲಾವಕಾಶ ಇರುತ್ತದೆ. ಕಡಿಮೆ ಪ್ರೀಮಿಯಂ ಧರ: ಮುಂಗಾರು ಹಂಗಾಮಿನ ರಾಗಿ ಮತ್ತು ಆಹಾರ ಧಾನ್ಯಗಳ ಬೆಳೆಗಳಿಗೆ ರೈತರು ಪಾವತಿಸಬೇಕಾದ ವಿಮಾ ಕಂತು ಕೇವಲ ಶೇ. 2 ರಷ್ಟು ಮಾತ್ರವಾಗಿರುತ್ತದೆ. ಬಾಕಿ ಉಳಿದ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಸಬ್ಸಿಡಿ ರೂಪದಲ್ಲಿ ಭರಿಸಲಿದೆ. ಬೆಳೆ ಸಾಲ ಪಡೆದ ರೈತರು: ಬ್ಯಾಂಕ್ಗಳ ಮೂಲಕ ಮುಂಗಾರು ಬೆಳೆ ಸಾಲ ಪಡೆದ ರೈತರನ್ನು ಸ್ವಯಂಚಾಲಿತವಾಗಿ ವಿಮೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಈ ಯೋಜನೆಯಿಂದ ಹೊರಗುಳಿಯಲು ಇಚ್ಛಿಸಿದರೆ, ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಬ್ಯಾಂಕ್ಗೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು. ಸಾಲ ಪಡೆಯದ ರೈತರು: ಸಾಲ ಪಡೆಯದ ರೈತರು ಜಮೀನಿನ ಪಹಣಿ (RTC), ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರಗಳೊಂದಿಗೆ ನೋಂದಾಯಿಸಿ ಕೊಳ್ಳಬಹುದಾಗಿದೆ ರೈತರು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್,ಸಹಕಾರ ಸಂಘಗಳು,ಗ್ರಾಮ ಒನ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (CSC) ಅರ್ಜಿ ಸಲ್ಲಿಸಬಹುದಾಗಿದೆ, ಕೊನೆಯ ದಿನದವರೆಗೂ ಕಾಯದೇ ತಕ್ಷಣವೇ ವಿಮೆ ಮಾಡಿಸಿ ತಮ್ಮ ಮುಂಗಾರು ರಾಗಿ ಬೆಳೆಗೆ ಆರ್ಥಿಕ ಭದ್ರತೆ ಪಡೆಯಬೇಕಾಗಿ ಸಹಾಯಕ ಕೃಷಿ ನಿರ್ದೇಶಕ ಆರ್,ರಂಗನಾಥ್ ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ@publicnewskunigal