ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಸಂಬಂಧ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ಶಾಸಕ ಡಾ.ರಂಗನಾಥ್!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯ ಅವರಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತು ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದಲ್ಲಿ ಬಿಸಿಲು ಬಸವಣ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಡಪ್ರಭು ಕೆಂಪೇಗೌಡರ ಜ್ಯೋತಿಗೆ ಶಾಸಕ ಡಾ.ರಂಗನಾಥ್ ಶನಿವಾರ ವಿದ್ಯುಕ್ತ ಚಾಲನೆ ನೀಡಿದರು ಹುತ್ರಿದುಗ್ರ ಬೆಟ್ಟದಿಂದ ಹೊರಟ ಜ್ಯೋತಿ ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಂಘಟನೆಗೊಂಡ ತಾಲ್ಲೂಕು ಆಡಳಿತ ಪೂರ್ಣಕುಂಭದೊಂದಿಗೆ ತಮಟೆ ವಾದ್ಯಗಳೊಂದಿಗೆ ಪ್ರಾರಂಭವಾದ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಸಾಗಿ ಪಟ್ಟಣದ ತಾಲ್ಲೂಕು ಕಚೇರಿಯ ಅವರಣಕ್ಕೆ ಆಗಮಿಸಿದ ತಾಲ್ಲೂಕು ಆಡಳಿತ ಹಾಗೂ ಶಾಸಕರು ನಾಡಪ್ರಭು ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಜಿ ಕೆಂಪೇಗೌಡರು ಒಬ್ಬ ಸಾಮಂತ ರಾಜ ಆತನಲ್ಲಿ ಸಾಮ್ರಾಟನ ಗುಣಲಕ್ಷಣವಿತ್ತು ಈ ಜಗತ್ತಿನ ಇತಿಹಾಸದಲ್ಲಿ ಸಾಮ್ರಾಟರನ್ನೆ ಎದುರು ಹಾಕಿಕೊಂಡು ಭೈರವ ನಾಣ್ಯಗಳನ್ನು ಮುದ್ರಿಸಿ ಜಾರಿಗೆ ತಂದಿದ್ದು ಕೆಂಪೇಗೌಡರು ಮಾತ್ರ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಅಲ್ಲಿನ ನಾಡಹಬ್ಬವನ್ನು ನೊಡಿ ಅದೆ ರೀತಿಯಲ್ಲಿ ಬಂದು ಬೆಂಗಳೂರು ಎಂಬ ನಗರವನ್ನೆ ನಿರ್ಮಿಸಿದರು ಪ್ರತಿಯೊಬ್ಬರಿಗೂ ಕೂಡ ಅವರವರ ವೃತ್ತಿಗೆ ಅನುಗುಣವಾಗಿ ಪೆಟೆಗಳನ್ನು ನಿರ್ಮಿಸಿ ಕೊಟ್ಟರು
ಈ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದರು ಶಾಸಕರು ನಾಡಪ್ರಭು ಕೆಂಪೇಗೌಡರ ಕೊಡುಗೆ ಈ ನಾಡಿಗೆ ಅಪಾರವಾದದ್ದು ಅವರ ಆಳ್ವಿಕೆಯಲ್ಲಿದ್ದ ಹುತ್ರಿದುರ್ಗ ಅವರ ಪ್ರತಿಮೆ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಮುಂಬರುವ ದಿನಗಳಲ್ಲಿ ಹುತ್ರಿದುರ್ಗ ಬೆಟ್ಟದಲ್ಲಿ ಅದ್ದೂರಿಯಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರನ್ನ ಹಾಗೂ ಎಸ್.ಎಸ್.ಎಲ್.ಸಿ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿಲಾಯಿತು ಇದೆ ವೇಳೆ ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಸಸಿಗಳನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ.ತಹಶೀಲ್ದಾರ್ ಕರಿಯನಾಯ್ಕ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ವಸಂತ್ ಕುಮಾರ್. ಕಾಸಾಪ ಅಧ್ಯಕ್ಷ ರಮೇಶ್. ಸಹಾಯಕ ಕೃಷಿ ನಿರ್ದೇಶಕ ರಂಗನಾಥ್ ತೋಟಗಾರಿಕೆ ಇಲಾಕೆಯ ಸಹಾಯಕ ನಿರ್ದೇಶಕ ದರ್ಶನ್,ಬಿಇಒ ಮಮತಾಮಣಿ, ಸೆರಿದಂತೆ ತಾಲ್ಲೂಕು ಮಟ್ಟದ ಹಲವು ಅಧಿಕಾರಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಿಯಾಗಿದ್ದರು