ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ|AMCS ತಂತ್ರಾಂಶ ಅಳವಡಿಸುವ ಮೂಲಕ ರೈತರಿಗೆ ಮರಣ ಶಾಸನ ಬರೆಯಲು ಮಂದಾದ ರಾಜ್ಯ ಸರ್ಕಾರ ಬಿ,ಎನ್ ಜಗದೀಶ್ ಆರೋಪ!

Spread the love

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ AMCS ಅಳವಡಿಸುವ ಮೂಲಕ ಹೈನುಗಾರಿಕೆಯನ್ನು ನಬ್ಬಿದ್ದ ರೈತರಿಗೆ ಮರಣ ಶಾಸನ ಬರೆಯಲು ಮಂದಾದ ರಾಜ್ಯ ಸರ್ಕಾರ ಬಿ,ಎನ್ ಜಗದೀಶ್ ಆರೋಪ!

ಕುಣಿಗಲ್ ಸುದ್ದಿ;-ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ,ಎನ್ ಜಗದೀಶ್ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಾಲು ಉತ್ಪಾದಕರ ರೈತರ ಐದು ರೂಪಾಯಿಗಳ ಸಹಾಯಧನವನ್ನು ನಿಲ್ಲಿಸಿದ್ದಲ್ಲದೆ ಈಗ AMCS ತಂತ್ರಾಂಶ ಅಳವಡಿಸುವ ಮೂಲಕ ಹೈನುಗಾರಿಕೆಯನ್ನು ನಂಬಿರುವ ಹಾಲು ಉತ್ಪಾದಕ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದ್ದಾರೆ ಒಂದು ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ AMCS ತಂತ್ರಾಂಶ ಅಳವಡಿಸಿದರೆ ಹಾಲಿನಲ್ಲಿರುವ ಕೊಬ್ಬಿನಾಂಶ ದಾಖಲಾಗುವ ಕಾರಣದಿಂದ ಸಮಸ್ಯೆ ಎದುರಾಗಲಿದೆ ಎಚ್,ಎಫ್ ಹಸುಗಳನ್ನು ಸಾಕಿರುವ ರೈತರಿಗೆ ಸಮಸ್ಯೆ ಎದುರಾಗಲಿದೆ ಒಂದೆಡೆ ಸರ್ಕಾರ ಹೆಚ್,ಎಫ್ ಹಸು ಸಾಕಣಿಕೆಗೆ ಸಹಾಯಧನವನ್ನು ನೀಡಿ ಮತ್ತೊಂದೆಡೆ ಹಾಲಿಗೆ ನೀಡುವ ಐದು ರೂಪಾಯಿ ಸಹಾಯಧನವನ್ನು ಕಡಿತಗೊಳಿಸುವ ಕೆಲಸಕ್ಕೆ ಮುಂದಾಗಿದೆ ಕೂಡಲೆ ಸರ್ಕಾರ ಇದನ್ನು ಕೈ ಬಿಡಬೇಕು

ಇಲ್ಲದಿದ್ದರೆ ಜೆಡಿಎಸ್ ವರಿಷ್ಠರ ಉಪಸ್ಥಿತಿಯಲ್ಲಿ ಹೊರಾಟ ಮಾಡಬೇಕಾಗುತ್ತದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರ ತಂಡಾವ ಆಡುತ್ತಿದೆ ಮತ್ತೊಂದೆಡೆ ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರ ವಿತರಣೆ ಮಾಡಿಲ್ಲ ಬ್ಯಾಂಕ್ ಗಳಲ್ಲಿ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಲಾಗುತ್ತಿದೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಸಾಲ ವಸೂಲಾತಿ ಮಾಡದಂತೆ ಆದೇಶ ಮಾಡಿದರು ತಾಲ್ಲೂಕಿನಲ್ಲಿ ರೈತರಿಗೆ ಕಿರುಕುಳ ತಪ್ಪಿಲ್ಲ ರೈತರಿಗೆ ಬರುವ ರಾಗಿ ಹಣ,ಕೊಬ್ಬರಿ ಹಣ,ನರೇಗಾ ಹಾಗೂ ಬರ ಪರಿಹಾರದ ಹಣವನ್ನು ಬ್ಯಾಂಕ್ ಗಳು ಸಾಲಕ್ಕೆ ಜಮಾ ಮಾಡುತ್ತಿವೆ ಇಂತಹ ಸಮಯದಲ್ಲಿ ರೈತರ ಹಿತ ಕಾಪಾಡುವ ಕೆಲಸ ಬಿಟ್ಟು ಹೈನುಗಾರಿಕೆಯನ್ನು ನಂಬಿದ್ದ ರೈತರ ಸಹಾಯಧನಕ್ಕೆ ಕತ್ತರಿ ಹಾಕುವ ಉದ್ದೇಶದಿಂದ ಸಹಕಾರ ಸಂಘಗಳಿಗೆ AMCS ಅಳವಡಿಸಲು ಮುಂದಾಗಿದೆ ತಾಲ್ಲೂಕಿನ ಬಹುತೇಕ ರೈತರು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಆದರೆ ಇದುವರೆಗೂ ಶಾಸಕ ಡಾ,ರಂಗನಾಥ್ ಈ ಬಗ್ಗೆ ಚಕಾರವೆತ್ತಿಲ್ಲ ಹಣ ಹಂಚಿ ಅಧಿಕಾರಕ್ಕೆ ಬಂದವರಿಗೆ ರೈತರ ಸಮಸ್ಯೆ ಹೇಗೆ ತಿಳಿಯಬೇಕು

ಸರ್ಕಾರದ ಮೇಲಿನ ಹೊರೆ ತಗ್ಗಿಸಲು ಪ್ರತಿವರ್ಷ ಬೇಸಿಗೆಯಲ್ಲಿ ಸರ್ಕಾರಗಳು ಹಾಲಿನ ದರ ಏರಿಕೆ ಮಾಡಿದರೆ ಈ ದರಿದ್ರ ಸರ್ಕಾರ ಬಂದ ನಂತರ ಹಾಲಿನ ದರ ಕಡಿಮೆ ಮಾಡಿದ್ದು ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಸಹಾಯಧನ ಖಡಿತಗೋಳಿಸಿದ್ದು ಈಗ ಶಾಶ್ವತವಾಗಿ ಸಹಾಯಧನವನ್ನು ಕಡಿತಗೋಳಿಸಲು ಮುಂದಾಗಿದೆ ಜೋತೆಗೆ ಪಶು ಆಹಾರದ ಧರವನ್ನು ಏರಿಕೆ ಮಾಡಲಾಗಿದೆ ಜರ್ಸಿ ಹಾಗೂ ಎಮ್ಮೆಗಳನ್ನು ಹೊರತುಪಡಿಸಿದರೆ ಹೆಚ್,ಎಫ್ ತಳಿಯ ಹಸುಗಳಲ್ಲಿ ಉತ್ಪತ್ತಿಯಾಗುವ ಹಾಲಿನಲ್ಲಿ ಕೊಬ್ಬಿನಂಶ ಕಡಿಮೆ ಇರುವ ಕಾರಣ ಹಾಲು ಉತ್ಪಾದಕರ ಸಂಘಗಳಿಗೆ AMCS ತಂತ್ರಾಂಶ ಅಳವಡಿಸಿದರೆ ಹೆಚ್ಚು ಹಾಲು ಉತ್ಪತ್ತಿಮಾಡುವ ಕಾರಣದಿಂದ ಹೆಚ್,ಎಫ್ ಹಸುಗಳನ್ನು ಸಾಕಿರುವ ರೈತರ ಪರಿಸ್ಥಿತಿ ಏನಾಗಲಿದೆ ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲದಂತಾಗಿದೆ ಎಂದು ಜೆಡಿಎಸ್ ಅಧ್ಯಕ್ಷ ಬಿ,ಎನ್ ಜಗದೀಶ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು ಈ ಬಗ್ಗೆ ಕೂಡಲೆ ಸಹಕಾರ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು ಈ ವೇಳೆ ತಾಲ್ಲೂಕು ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್,ಮಾಜಿ ಪುರಸಭೆಯ ಅಧ್ಯಕ್ಷ ಕೆ,ಎಲ್ ಹರೀಶ್,ಮುಖಂಡರಾದ ರಂಗಸ್ವಾಮಿ,ದೀಪು,ಮಂಜುನಾಥ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು @publicnewskunigal