ವಿದ್ಯುತ್ ಶರ್ಟ್ ಸರ್ಕ್ಯೂಟ್ ನಿಂದ ಅಸ್ವಸ್ಥಗೊಂಡಿದ್ದ ಯುವರೈತ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹುಲಿಕಟ್ಟೆ ಗ್ರಾಮದಲ್ಲಿ ಶನಿವಾರ ರೇಷ್ಮೆ ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದ ಗ್ರಾಮದ ಯುವ ರೈತ ಅವಿನಾಶ್ (30) ನನ್ನು ಕೂಡಲೆ ಪಕ್ಕದ ಚೌಡನಕುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುದಿದ್ದಾರೆ ಆದರೆ ಶನಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಅರ್ಧಗಂಟೆ ಕಾದಿದ್ದಾರೆ ಆಸ್ಪತ್ರೆಯಲ್ಲಿ ವೈದ್ಯರಾಗಲಿ ಅಥವಾ ವೈದ್ಯಕೀಯ ಸಿಬ್ಬಂದಿಯಾಗಲಿ ಇಲ್ಲದ ಕಾರಣ ಬಳಿಕ ಸಂಬಂಧಿಕರ ಕಾರಿನಲ್ಲಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವಿನಾಶ್ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ
ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆತಿದ್ದರೆ ನನ್ನ ಮಗ ಬದುಕುತ್ತಿದ್ದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯ ಕಾರಣದಿಂದ ಇಂದು ಮಗನನ್ನು ಕಳೆದುಕೊಂಡಿದ್ದೆವೆ ಕಳೆದ ಎರಡು ವರ್ಷಗಳ ಹಿಂದಷ್ಟೇ ಮಗನಿಗೆ ಮದುವೆ ಮಾಡಲಾಗಿತ್ತು ನನ್ನ ಸೊಸೆ ಬಾಣಂತಿ ಮೂರು ತಿಂಗಳ ಹೆಣ್ಣುಮಗುವಿದೆ ಎಂದು ಅವಿನಾಶ್ ತಂದೆ ಗಂಗಾಧರಯ್ಯ ಆಸ್ಪತ್ರೆಯ ಬಳಿ ಕಣ್ಣಿರು ಹಾಕುವ ದೃಶ್ಯ ಮನಕಲಕುವಂತಿತ್ತು ವೈದ್ಯ ಶಾಸಕರ ತವರು ಕ್ಷೇತ್ರದಲ್ಲಿ ಸರಿಯಾದ ವೈದ್ಯಕೀಯ ಸೇವೆ ಕ್ಷೇತ್ರದ ಜನರಿಗೆ ಸಿಗದಂತಾಗಿದೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ವೈದ್ಯರಿಲ್ಲದಂತಾಗಿದೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಇದ್ದರು ಸಹ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೆಳಿಬರುತ್ತಿದೆ,
ನಾಟ್ ರೀಚಬಲ್ ಆದ ತಾಲ್ಲೂಕು ಆಡಳಿತ ವೈದ್ಯಧಿಕಾರಿ;-ಘಟನೆಯ ಬಗ್ಗೆ ದೂರು ನೀಡಲು ಸಂಬಂಧಿಕರು ಹಾಗೂ ಸಾರ್ವಜನಿಕರು ತಾಲ್ಲೂಕು ಆಡಳಿತ ವೈದ್ಯಧಿಕಾರಿ ಡಾ,ಮರಿಯಪ್ಪ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಮೊದಲು ರಿಂಗಣಿಸಿದ ಮೊಬೈಲ್ ನಂತರ ನಾಟ್ ರೀಚಬಲ್ ಹಾಗಿದೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು ಸಂಬಂಧ ಪಟ್ಟ ಅಧಿಕಾರಿಗಳು ಆಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನಮಗೆ ನ್ಯಾಯ ಕೊಡಿಸಿ ಎಂಬುದು ಮೃತ ಅವಿನಾಶ್ ಕುಟುಂಬಸ್ಥರ ಒತ್ತಾಯವಾಗಿದೆ @publicnewskunigal