ಲಿಂಕ್ ಕೆನಾಲ್ ಗೆ ನಮ್ಮ ವಿರೋಧವಿಲ್ಲ ಆದರೆ ಕುಣಿಗಲ್ ಪಾಲಿನ ನೀರನ್ನು ಮಾಗಡಿಗೆ ಕೊಂಡೊಯ್ಯಲು ನಮ್ಮ ವಿರೋಧ ಜೆಡಿಎಸ್ ಅಧ್ಯಕ್ಷ ಬಿ,ಎನ್ ಜಗದೀಶ್!
ಕುಣಿಗಲ್ ಪಟ್ಟಣದ ಜೆ.ಡಿ.ಎಸ್ ಕಚೇರಿಯಲ್ಲಿ ಬುಧವಾರ ಸುದ್ದಿ ಗೊಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಬಿ,ಎನ್ ಜಗದೀಶ್ ಕುಣಿಗಲ್ ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ನಿರ್ಮಾಣವಾಗಿರುವ ನಾಲೆಗಳಿಗೆ ನೀರಿಲ್ಲ ಕುಣಿಗಲ್ ತಾಲ್ಲೂಕಿಗೆ ನೀಗದಿಯಾಗಿರುವ ನೀರನ್ನು ಮಾಗಡಿ ತಾಲ್ಲೂಕುಗೆ ಕೊಂಡೊಯ್ಯಲು ಶಾಸಕರು ಹೋರಾಟ ಮಾಡುತ್ತಿದ್ದಾರೆ ಇವರು ಮಾಗಡಿ ತಾಲ್ಲೂಕಿನ ಶಾಸಕರ ಅಥವಾ ಕುಣಿಗಲ್ ತಾಲ್ಲೂಕಿನ ಶಾಸಕರ ಎಂಬುದು ಅನುಮಾನಕ್ಕೆ ಕಾರಣವಾಗಿದೆ
ಕುಣಿಗಲ್ ತಾಲ್ಲೂಕಿನ ರೈತರಿಗೆ ಶಾಸಕರು ಮರಣ ಶಾಸನ ಬರೆಯಲು ಹೊರಟಿದ್ದಾರೆ ಡಿ,ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ,ಕೆ ಸುರೇಶ್ ರವರನ್ನು ಮೆಚ್ಚಿಸಲು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖಂಡರ ಗೆಲ್ಲಿಸುವ ಸಲುವಾಗಿ ಈ ಹಿಂದೆ ಡಿ,ಕೆ ಶಿವಕುಮಾರ್ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವುದಾಗಿ ತಿಳಿಸಿ ಇಗ ಮಾಗಡಿ ತಾಲ್ಲೂಕಿನ ಮತದಾರರ ಋಣ ತಿರಿಸುವ ಸಲುವಾಗಿ ಕುಣಿಗಲ್ ತಾಲ್ಲೂಕಿನ ರೈತರಿಗೆ ನಿಗದಿಯಾಗಿರುವ ನೀರನ್ನು ಮಾಗಡಿ ತಾಲ್ಲೂಕಿಗೆ ಕೊಂಡೋಯ್ಯಲು ಮುಂದಾಗಿರುವುದು ತಾಲ್ಲೂಕಿನ ರೈತರಿಗೆ ಮಾಡಿರುವ ಅನ್ಯಾಯವಲ್ಲದೆ ಮತ್ತೆನು ಡಿ,26 ನಾಲೆಯಿಂದ ಲಿಂಕ್ ಕೆನಾಲ್ ಪ್ರಾರಂಭಿಸಲು ಎಂ,ಟಿ ಕೃಷ್ಣಪ್ಪ ಹಾಗೂ ಸುರೇಶ್ ಗೌಡ ಸಹ ಒತ್ತಾಯಿಸಿದ್ದಾರೆ ಹೋರತು ಲಿಂಕ್ ಕೆನಾಲ್ ಗೆ ಯಾರು ವಿರೋಧ ವ್ಯಕ್ತಪಡಿಸಿಲ್ಲ ನಮ್ಮ ವಿರೋಧ ಇರುವುದು ಬೇರೆ ಜಿಲ್ಲೆಗೆ ಹೇಮಾವತಿಯ ನೀರನ್ನು ಹರಿಸಲು ಹೊರಟಿರುವುದಕ್ಕೆ ಅಷ್ಟೆ ಶಾಸಕರು ಸುಖ ಸುಮ್ಮನೆ ತಾಲ್ಲೂಕಿನ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಯೋಜನೆಯ ಬಗ್ಗೆ ತಾಲ್ಲೂಕಿನ ರೈತರಿಗೆ ಸರಿಯಾದ ಮಾಹಿತಿ ಇಲ್ಲ ಯಾರಿಗೆ ಎಷ್ಟು ನೀರು ನಿಗದಿ ಮಾಡಲಾಗಿದೆ ಎಂದು ಶಾಸಕರು ಬಹಿರಂಗವಾಗಿ ತಿಳಿಸಬೇಕು
ಕುಣಿಗಲ್ ತಾಲ್ಲೂಕಿಗೆ ನಿಗದಿಯಾಗಿರುವ 3.03ಟಿ,ಎಂ,ಸಿ ನೀರು ಹರಿದು ಮೊದಲು ನಮ್ಮ ತಾಲ್ಲೂಕಿನ ಕೆರೆಗಳು ತುಂಬಲಿ ಇವರು ಬೇಕಾರೆ ಮಾಗಡಿ ತಾಲ್ಲೂಕಿಗೆ ನೀರನ್ನು ನಿಗದಿ ಪಡಿಸಿ ನಂತರ ಕೊಂಡೊಯ್ಯಲಿ ಇದಕ್ಕೆ ನಮ್ಮ ವಿರೋಧವಿಲ್ಲ ನಮ್ಮ ಪಾಲಿನ ನೀರನ್ನು ಮಾಗಡಿ ತಾಲ್ಲೂಕಿಗೆ ತೆಗೆದುಕೊಂಡ ಹೊಗುವುದಕ್ಕಷ್ಟೆ ನಮ್ಮ ವಿರೋಧ ಕುಣಿಗಲ್ ಪಟ್ಟಣದ ದೊಡ್ಡಕೆರೆಯ ನೀರನ್ನು ಕುಡಿಯುವ ನೀರಿಗಾಗಿ ನಿಗದಿ ಪಡಿಸಿ ಅಚ್ಚುಕಟ್ಟುದಾರರಿಗೆ ಅನ್ಯಾಯ ಮಾಡಲಾಗಿದೆ ಹಲವು ವರ್ಷಗಳಿಂದ ಕೆರೆಯ ನೀರನ್ನು ಹೊರಗೆ ಬಿಡದೆ ಕುಡಿಯಲು ಯೋಗ್ಯವಲ್ಲದ ನೀರನ್ನು ಶುದ್ದಿಕರಿಸಿ ಪಟ್ಟಣದ ಜನರಿಗೆ ನೀಡಲಾಗುತ್ತಿದೆ ಕುಡಿಯುವ ನೀರಿಗೆ ಸೀಮಿತಗೊಳಿಸು ಬೇರೆ ಕಡೆಗೆ ದೊಡ್ಡಕೆರೆಯ ನೀರನ್ನು ಕೊಂಡೊಯ್ಯುವ ಉನ್ನಾರ ನಡೆಯುತ್ತಿದೆ
ತಾಲ್ಲೂಕಿನಲ್ಲಿ ಇದು ವರೆಗೂ ಶ್ರೀರಂಗ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿಲ್ಲ ಕಾಂಗ್ರೆಸ್ ಮುಖಂಡರು ಇದರ ಬಗ್ಗೆ ಅವಲೋಕನ ಮಾಡಬೇಕು ಯೋಜನೆಯಿಂದ ಯಾರಿಗೆ ಅನುಕೂಲ ಹಾಗೂ ಅನಾನುಕೂಲ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು ನೀರಾವರಿ ವಿಷಯದಲ್ಲಿ ಪಕ್ಷತಿತವಾಗಿ ಹೋರಾಟ ಮಾಡಬೇಕಿದೆ ಶುಕ್ರವಾರ ದೊಡ್ಡಕೆರೆ ಅಚ್ಚುಕಟ್ಟುದಾರರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಬಳಿಕ ಹುತ್ರಿದುರ್ಗ ಹುಲಿಯೂರುದುರ್ಗ ಭಾಗದ ರೈತರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಹೊರಾಟಕ್ಕೆ ರೂಪುರೇಷೆಗಳನ್ನು ಮಾಡಲಾಗುವುದು ಎಂದರು ಈ ವೇಳೆ ತಾಲ್ಲೂಕು ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್,ಪುರಸಭೆ ಮಾಜಿ ಅಧ್ಯಕ್ಷ ಕೆ,ಎಲ್ ಹರೀಶ್,ಹಾಗೂ ರಂಗಸ್ವಾಮಿ,ಯೋಗೇಶ್ ಸೆರಿದಂತೆ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು @publicnewskunigal