ರೈತರು ಬೆಳೆ ವಿಮೆಗೆ ನೊಂದಯಿಸಿಕೋಳ್ಳಲು ಆಗಸ್ಟ್ 16 ಕೊನೆಯ ದಿನ!

Spread the love

ಕುಣಿಗಲ್ ಸುದ್ದಿ;- ಬೆಳೆ ವಿಮೆ ಮಾಡಿಸಲು ರೈತರಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ

ಕುಣಿಗಲ್ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು ಪ್ರಸ್ತುತ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಸಹಾಯ ಕೃಷಿ ನಿರ್ದೇಶಕ ರಂಗನಾಥ್ ತಿಳಿಸಿದ್ದಾರೆ ಪ್ರಸಕ್ತ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ ಇನ್ನೂ ಬೆಳೆ ಸಾಲ ಪಡೆದಿರುವ ರೈತರಿಗೆ ಆಗಸ್ಟ್ 25 ರ ವರೆಗೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ ಕಳೆದ ವರ್ಷ 600 ಮಂದಿ ರೈತರು ಮಾತ್ರ ವಿಮೆ ನೊಂದಣಿ ಮಾಡಿದ್ದರು ಪ್ರಸಕ್ತ ಸಾಲಿನಲ್ಲಿ 7515 ಮಂದಿ ರೈತರಿಂದ ಬೆಳೆ ವಿಮೆ ಮಾಡಲಾಗಿದೆ ಆಗಸ್ಟ್ 16 ರ ಒಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಬೆಳೆ ವಿಮೆಗೆ ನೊಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಇದುವರೆಗೂ ಬೆಳೆ ವಿಮೆಯಲ್ಲಿ ನೊಂದಾಯಿಸಿಕೊಳ್ಳದ ರೈತರು ಆಗಸ್ಟ್ 16 ರ ಒಳಗೆ ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ@publicnewskunigal