
ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಯ ಮೇಲೆ ಪೊಲೀಸರ ದಾಳಿ 260 ಗ್ಯಾಸ್ ಸಿಲಿಂಡರ್ ಮೂರು ವಾಹನಗಳ ಜಪ್ತಿ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಹೊಸೂರು ಗ್ರಾಮದ ಗಂಗಣ್ಣ ಅಲಿಯಾಸ್ ರಂಗಸ್ವಾಮಿ ಎಂಬುವವರ ತೋಟದಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಟಿ.ಎ ಓಂಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ನವೀನ್‌ಗೌಡ ಹಾಗೂ ಪಿ.ಎಸ್.ಐ ಕೃಷ್ಣಕುಮಾರ್ ನೇತೃತ್ವದ ಪೊಲೀಸರ ತಂಡ ಶನಿವಾರ ರಾತ್ರಿ ದಾಳಿ ನಡೆಸಿ ಕಾನೂನು ಬಾಹಿರ ಹಾಗೂ ಅಸುರಕ್ಷಿತವಾಗಿ ಗೃಹ ಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಗಳಿಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ಹೇರೊಹಳ್ಳಿ ಚಂದನ್ ಗೌಡ,ಮತ್ತು ಬೆಂಗಳೂರಿನ ಸ್ವಾಮಿ,ಶರತ್,ಚಂದ್ರೇಗೌಡ,ಹಾಗೂ ಕೃತ್ಯಕ್ಕೆ ಬಳಸಿದ್ದ 260 ಸಿಲಿಂಡರ್ ಗಳು ಮೂರು ವಾಹನಗಳು ಗ್ಯಾಸ್ ರಿಫಿಲ್ಲಿಂಗ್ ಮಾಡುವ ಸಲಕರಣೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ @publicnewskunigal