
ಐದು ದಿನಗಳ ಒಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಯ ಎಚ್ಚರಿಕೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ನಿಡಸಾಲೆ ಹಾಗೂ ಕೊಡವತ್ತಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿಗಳು ಬೇಟಿನೀಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತಾರೆ ಎಂದು ಸಮಯ ನಿಗದಿಯಾಗಿತ್ತು ಆದರೆ ಮಧ್ಯಾನ್ನ ಮೂರು ಗಂಟೆಯಾದರು ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಬಾರದ ಕಾರಣ ಕೆಲಸ ಕಾರ್ಯ ಬಿಟ್ಟು ಜಿಲ್ಲಾಧಿಕಾರಿಗಳ ಬಳಿ ಕುಡಿಯುವ ನೀರಿನ ಹಾಗೂ ಗ್ರಾಮದ ಸಮಸ್ಯೆ ಬಗ್ಗೆ ಹೇಳಲು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ಕಾದು ಕುಳಿತಿದ್ದ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಅಧಿಕಾರಿಗಳು ಬಾರದ ಕಾರಣ ಅಸಮಾಧಾನಗೊಂಡು ವಾಪಸ್ ತೆರಳಿದರು
ಇನ್ನೂ ಗ್ರಾಮದಲ್ಲಿ ಕಳೆದ ಐದು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು ಇದುವರೆಗೂ ಸಮಸ್ಯೆ ಬಗೆ ಹರಿದಿಲ್ಲ ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರು ಸಹ ಇದುರೆಗೂ ಸಮಸ್ಯೆ ಬಗೆಹರಿಸಲು ಯಾವುದೆ ಕ್ರಮ ಕೈಗೊಂಡಿಲ್ಲ ಮೂರು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ ಆದರೆ ಒಂದೊಂದು ದಿನ ಒಂದೊಂದು ಕಡೆಯಲ್ಲಿ ನೀರು ತಂದು ಬಿಡಲಾಗುತ್ತಿದೆ ಈ ನೀರನ್ನು ಕುಡಿದ ಗ್ರಾಮದಲ್ಲಿ ಇರುವ ಮಕ್ಕಳು ಮತ್ತು ವಯೋವೃದ್ದರು ನೆಗಡಿ.ಕೆಮ್ಮು.ತಲೆನೋವು.ಜ್ವರದಿಂದ ನಾರೋಗ್ಯಕ್ಕೆ ತುತ್ತಾಗಿದ್ದು ನಿತ್ಯ ಆಸ್ಪತ್ರೆಗೆ ಅಲೆದಾಟ ಮಾಡುವಂತಾಗಿದೆ ಗ್ರಾಮದಲ್ಲಿ ಚರಂಡಿಯಲ್ಲಿ ಕೊಳಚೆ ನೀರು ತುಂಬಿದ್ದು ಸ್ವಚ್ಚತೆ ಮರೀಚಿಕೆಯಾಗಿದೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡು ಹಲವು ದಿನಗಳು ಕಳೆದಿದೆ ಅದಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಕೊರೆಯಲಾಗಿದ್ದ ಕೋಳವೆಬಾವಿ ಬತ್ತಿಹೊಗಿದೆ ಕುಡಿಯುವ ನೀರಿಗಾಗಿ ಒಂದು ಸಾವಿರ ಅಡಿ ಅಳದಷ್ಟು ಕೊಳವೆಬಾವಿ ಕೊರೆದರು ನೀರು ಬರುತ್ತಿಲ್ಲ ಕುಡಿಯಲು ನೀರಿಲ್ಲದೆ ಪರದಾಡುವಂತಗಿದ್ದು ಗ್ರಾಮದಲ್ಲಿ 36 ಮನೆಗಳಿದ್ದು ಬಹುತೆಕ ವಯೋವೃದ್ದರೆ ಹೆಚ್ಚಾಗಿ ಇರುವ ಕಾರಣನಮಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ ಗ್ರಾಮದಲ್ಲಿ ಊರ ಹಬ್ಬವಿರುವ ಕಾರಣ ಶೀಘ್ರವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿರುವ ಗ್ರಾಮಸ್ಥರು ಐದು ದಿನಗಳ ಗಡುವು ನೀಡಿದ್ದು ಅಷ್ಟರಲ್ಲಿ ಸಮಸ್ಯೆ ಬಗೆ ಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದು ಈ ವೇಳೆ ಗ್ರಾಮದ ನಿಂಗಯ್ಯ.ಲೊಕೇಶ್.ಸಾಕಮ್ಮ. ಚಿಕ್ಕತಾಯಮ್ಮ.ಸುಜಾತಾಮ್ಮ.ಕುಮಾರ.ಶಶಿಧರ.ರಾಮಚಂದ್ರಯ್ಯ.ಗಿರೀಶ್. ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal