
ತೀವ್ರ ಕುತೂಹಲಕ್ಕೆ ಕಾರಣವಾದ ದಿವಂಗತ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಸಮಾಧಿಗೆ RR ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಭೇಟಿ!
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ದೊಡ್ಡ ಕೊಪ್ಪಲು ಗ್ರಾಮದ ದಿವಂಗತ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಸಮಾಧಿಗೆ ಭಾನುವಾರ ಹತ್ತನೆ ವರ್ಷದ ಪುಣ್ಯ ಸ್ಮರಣೆಯಿದ್ದು ಈ ಹಿನ್ನೆಲೆಯಲ್ಲಿ ಆರ್.ಆರ್ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ತೀವ್ರ ಕೂತುಹಲಕ್ಕೆ ಕಾರಣವವಾಗಿದೆ ದಿವಂಗತ ಡಿ.ಕೆ ರವಿ ಪತ್ನಿ ಕುಸುಮ ಹನುಮಂತರಾಯಪ್ಪ ರಾಜಕೀಯ ವಿರೋಧಿಯಾಗಿರುವ ಹಿನ್ನೆಲೆ ಹಾಗೂ ಪತಿ ಸಮಾಧಿ ಕಡೆಗೆ ಪತ್ನಿ ತಲೆ ಹಾಕದ ಕಾರಣಕ್ಕೆ ಇದಿಗ ಬಿಜೆಪಿ ಶಾಸಕ ಮುನಿರತ್ನ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ ಇನ್ನೂ 2015 ಮಾರ್ಚ್ 16 ರವಿ ಸಾವನ್ನಪ್ಪಿದ್ದು 2025ರ ಮಾರ್ಚ್ 16 ಕ್ಕೆ ಹತ್ತು ವರ್ಷಗಳು ತುಂಬಿದ್ದು ಈ ಹತ್ತು ವರ್ಷಗಳಲ್ಲಿ ಡಿ.ಕೆ ರವಿ ಸಮಾಧಿ ಭೇಟಿ ನೀಡದ ಹಲವು ಮಂದಿ ಇತ್ತಿಚೇಗೆ ಸಮಾಧಿಗೆ ಬೇಟಿ ನೀಡುತ್ತಿರುವುದು ಸ್ಥಳಿಯರಲ್ಲಿ ಹಾಗೂ ರಾಜಕೀಯ ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ರವಿ ಪತ್ನಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಕಣಕ್ಕಿಳಿದಿದ್ದ ಕುಸುಮ ಹನುಮಂತ ರಾಯಪ್ಪ ವಿರುದ್ಧ ಚುನಾವಣೆಯಲ್ಲಿ ಡಿ.ಕೆ ರವಿತಾಯಿ ಗೌರಮ್ಮನನ್ನು ಬಳಸಿಕೊಂಡು ಚುನಾವಣೆ ಸಮಯದಲ್ಲಿ ವೀವಾದಿತ ವಿಡಿಯೋ ಒಂದನ್ನು ಹರಿಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಇದಿಗ ಡಿ.ಕೆ ರವಿ ಸಮಾಧಿಗೆ ಭೇಟಿ ನೀಡಿರುವುದು ಸಹ ತೀವ್ರ ಚರ್ಚೆ ಹುಟ್ಟು ಹಾಕಿದೆ ಇನ್ನೂ ಕರೆ ಮಾಡಿ ಮಾಹಿತಿ ಪಡೆದಾಗ ಯಾವುದೆ ರಾಜಕೀಯ ಪ್ರೇರಿತ ಭೇಟಿ ಇದಾಗಿಲ್ಲ ಡಿ.ಕೆ ರವಿಯವರ ಹತ್ತನೆ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅವರ ಸಮಾಧಿಗೆ ಭೇಟಿ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಆರ್.ಆರ್ ನಗರ ಶಾಸಕ ಮುನಿರತ್ನ ತಿಳಿಸಿದ್ದಾರೆ ರಾಜಕೀಯ ಪ್ರೇರಿತ ಬೇಟಿಯನ್ನು ತಳ್ಳಿಹಾಕಿದ್ದಾರೆ @publicnewskunigal