
ಇತಿಹಾಸ ಪ್ರಸಿದ್ದ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಬಳಿ ಇರುವ ವಿಷ್ಣುವಿನ ಮೂರ್ತಿ ಯನ್ನು ಕಿಡಿಗೇಡಿಗಳು ಹೊಡೆದುಹಾಕಿ ವಿರುಪಗೋಳಿಸಿರುವ ಘಟನೆ ನಡೆದಿದ್ದು ಭಕ್ತರ ಆಕ್ರೋಶಕ್ಕ ಕಾರಣವಾಗಿದೆ!
ಕುಣಿಗಲ್ ತಾಲ್ಲೂಕಿನ ಬಿಳಿ ದೇವಾಲಯ ಗ್ರಾಮದ ಬಳಿ ಇರುವ ಇತಿಹಾಸ ಪ್ರಸಿದ್ಧ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಂಪರ್ಕಿಸುವ ಮೆಟ್ಟಿಲುಗಳ ಬಳಿ ಇರುವ ವಿಷ್ಣುಮೂರ್ತಿಯ ವಿಗ್ರಹವನ್ನು ಒಡೆದುಹಾಕಿ ವಿರೂಪಗೊಳಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು ದೇವಾಲಯದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಕಳೆದೊಂದು ವರ್ಷಗಳ ಹಿಂದೆ ಇದೇ ಮೂರ್ತಿಯ ಕೈಯನ್ನು ಮುರಿದು ಹಾಕಲಾಗಿತ್ತು ಆದರೆ ಮತ್ತೆ ಕೈಯನ್ನು ನಿರ್ಮಿಸಿ ಪೂಜೆ ಪುನಸ್ಕಾರಗಳೊಂದಿಗೆ ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು ಆದರೆ ತಡರಾತ್ರಿ ವಿಷ್ಣುಮೂರ್ತಿ ವಿಗ್ರಹವನ್ನು ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದಿ ವಿರೂಪಗೊಳಿಸಿ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ನಡೆದಿದ್ದು ದೃಶ್ಯ ದೇವಾಲಯದ ಬಳಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೇರೆಯಾಗಿದೆ
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯದಲ್ಲಿ ಯಾವುದೆ ರೀತಿಯ ಭದ್ರತೆ ಇಲ್ಲದಿರುವುದು ವಿಪರ್ಯಾಸ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ದೇವಾಲಯದ ಬಳಿ ಪದೆ ಪದೆ ಇಂತಹ ಅಹಿತಕರ ಘಟನೆಗಳು ನಡೆಯುತ್ತಿದ್ದು ಹಲವು ಬಾರಿ ದೇವಾಲಯದ ಹುಂಡಿ ಹಣಕ್ಕೆ ಕನ್ನಹಾಕಲಾಗಿದ್ದು ಇದುವರೆಗು ಕಳ್ಳರು ಮಾತ್ರ ಪತ್ತೆಯಾಗಿಲ್ಲ ದೇವಾಲಯದ ಕಾರ್ಯನಿರ್ವಣ ಅಧಿಕಾರಿಗಳ ದೂರು ಹಿನ್ನೆಲೆ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೇ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಕರಣ ದಾಖಲಾಗಿದೆ.ದೇವರ ವಿಗ್ರಹವನ್ನು ಕಾಲಿನಿಂದ ಒದ್ದು ಕಲ್ಲಿನಿಂದ ಹೊಡೆದು ವಿರೂಪ ಗೊಳಿಸಿ ಸ್ಥಳದಿಂದ ಕಾಲ್ಕಿತ್ತಿರುವ ದೃಶ್ಯ ದೇವಾಲಯಕ್ಕೆ ಅಳವಡಿಸಿರುವ ಸಿ.ಸಿ ಕ್ಯಾಮರದಲ್ಲಿ ಸೇರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದೆ ಕಿಡಿಗೇಡಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ದೇವಾಲಯ ಭಕ್ತರ ಆಗ್ರಹವಾಗಿದೆ @publicnewskunigal