
ಗೌಡತಿಯರ ಸೇನೆ ರಾಜ್ಯಧ್ಯಕ್ಷೆ ಹಾಗೂ ತಾಲ್ಲೂಕು ಜೆ.ಡಿ.ಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಭಕ್ತರಹಳ್ಳಿ ನಿಧನ ಹಿನ್ನೆಲೆ ಗಣ್ಯರ ಸಂತಾಪ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೊಬಳಿ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ರೇಣುಕಾ (62) ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರೇಣುಕಾ ರವರು ಚೇತರಿಸಿಕೊಳ್ಳುತ್ತಿದ್ದ ವೇಳೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಕುಸಿದುಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ ಗೌಡತಿಯರ ಸೇನೆ ಎಂಬ ಸಂಘಟನೆ ಹುಟ್ಟುಹಾಕಿ ರಾಜ್ಯಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದ ಇವರು ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದರು ನಾಡು ನುಡಿ ಕಲೆ ಸಾಹಿತ್ಯ ರಂಗಭೂಮಿ ಸೆರಿದಂತೆ ಸದಾ ಕನ್ನಡ ಪರ ಹೋರಾಟಗಳಲ್ಲಿ ತೊಡಗುವುದರೊಂದಿಗೆ ಮುಂಚೂಣಿಯಲ್ಲಿದ್ದ ಮಹಿಳಾ ನಾಯಕಿ ಹಾಗೂ ಹೊರಾಟಗಾರ್ತಿ ಇನ್ನಿಲ್ಲವಾಗಿದ್ದಾರೆ
ಗಣ್ಯರ ಸಂತಾಪ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.ಮಾಜಿ ಸಚಿವ ಡಿ.ನಾಗರಾಜಯ್ಯ.ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್.ಜೆಡಿಎಸ್ ಮುಖಂಡರಾದ ಡಾ.ರವಿಬಾಬು. ಬಿ.ಎನ್ ಜಗದೀಶ್ ಸೆರಿದಂತೆ ಹಲವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಭಕ್ತರ ಹಳ್ಳಿಯಲ್ಲಿ ಭಾನುವಾರ 11ಕ್ಕೆ ನಡೆಯಲಿದೆ @publicnewskunigal