
ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹುಂಡಿಗೆ ಇಲ್ಲ ಭದ್ರತೆ ಕಳ್ಳರ ಪಾಲಾಗುತ್ತಿರು ಭಕ್ತರು ನೀಡಿದ ದೇಣಿಗೆ!
ಕುಣಿಗಲ್ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಳೆದೊಂದು ವರ್ಷದಿಂದ ನಾಲ್ಕೈದು ಬಾರಿ ಕಳ್ಳತನ ನಡೆದಿದ್ದು ಭಕ್ತರು ದೇವರಿಗೆ ನೀಡಿದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದೆ ಶುಕ್ರವಾರ ತಡರಾತ್ರಿ ದೇವಾಲಯದ ಪಕ್ಕದಲ್ಲಿರುವ ಕೋಣೆಯೊಂದರಲ್ಲಿ ಇರಿಸಿದ್ದ ಮೂರು ಹುಂಡಿಗಳನ್ನು ಗೋಡೆ ಹೊಡೆದು ಕಳ್ಳರು ಹೊತ್ತೊಯ್ದು ಬೆಟ್ಟದ ಹಿಂಬದಿಯಲ್ಲಿ ಇರುವ ಅರಣ್ಯ ಪ್ರದೇಶದಲ್ಲಿ ಹಣ ತೆಗೆದುಕೊಂಡು ಖಾಲಿ ಹುಂಡಿಗಳನ್ನು ಎಸೆದು ಹೊಗಿದ್ದಾರೆ ದೇವಾಲಯದಲ್ಲಿ ರಾತ್ರಿವೇಳೆ ಭದ್ರತೆ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ಇಲ್ಲಿ ಪದೆ ಪದೆ ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಇತ್ತೀಚಿಗಷ್ಟೆ ಭಕ್ತರೊಬ್ಬರು ರಂಗನಾಥನಿಗೆ ಅದ್ದೂರಿಯಾಗಿ ಪೂಜೆ ಸಲ್ಲಿಸಿ ಹರಿಸೇವೆ ಮಾಡಿ ಭಕ್ತರಿಗೆ ಅನ್ನದಾನ ಮಾಡಿದ್ದರು ಇದಾದ ಬಳಿಕ ದೇವಾಲಯದ ಹುಂಡಿ ಎಣಿಕೆ ಆಗಿರಲಿಲ್ಲ ಇದೀಗ ಭಕ್ತರು ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿ ದೇವರಿಗೆ ನೀಡುತ್ತಿರು ಹುಂಡಿ ಹಣ ಕಳ್ಳರ ಪಾಲಗುತ್ತಿದ್ದರು ಸಹ ಮುಜರಾಯಿ ಇಲಾಖೆಯ ಅಧಿಕಾರಿಗಳು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ
ಕಳೆದಂದು ತಿಂಗಳ ಹಿಂದಷ್ಟೆ ಬೆಟ್ಟದ ಕೆಳಗೆ ಮೆಟ್ಟಿಲುಗಳ ಬಳಿ ಇರುವ ವಿಷ್ಣುಮೂರ್ತಿಯ ವಿಗ್ರಹವನ್ನು ಕಿಡಿಗೇಡಿಯೊಬ್ಬ ಕಾಲಿನಿಂದ ಒದ್ದು ಮುರಿದು ಹಾಕಿದ್ದ ದೃಶ್ಯ ಸಿಸಿ ಕ್ಯಾಮರದಲ್ಲು ಸೆರೆಯಾಗಿತ್ತು ಆದರೆ ಇದುವರೆಗೆ ಆರೋಪಿಯ ಪತ್ತೆಯಾಗಿಲ್ಲ ದೇವಾಲಯದಲ್ಲಿ ಇದೆ ರೀತಿಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು ಕೂಡಲೆ ಇವುಗಳನ್ನು ಸರಿಪಡಿಸಿ ಕಳ್ಳತನಕ್ಕೆ ಕಡಿವಾಣ ಹಾಕುವ ಮೂಲಕ ಭಕ್ತರು ನೀಡುವ ದೇಣಿಗೆ ಹಣವನ್ನು ಇ ಹುಂಡಿ ಅಥವ ವಾರಕ್ಕೊಮ್ಮೆ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂಬುದು ಶ್ರೀ ರಂಗನಾಥಸ್ವಾಮಿಯ ಭಕ್ತರ ಆಗ್ರಹವಾಗಿದೆ ಇನ್ನೂ ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಮಹೇಶ್ ನೀಡಿದ ದೂರು ಹಿನ್ನೆಲೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಶ್ವಾನ ಧಳ ಬೆರಳಚ್ಚು ತಜ್ಞರ ತಂಡ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal