
ಕುಣಿಗಲ್ ಸುದ್ದಿ;-ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯ ಧನ ನೀಡಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ!
ಕುಣಿಗಲ್ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ 2025-26 ನೇ ಸಾಲಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದ್ದು ಈ ಯೋಜನೆಯಡಿ ವಿವಿಧ ಹಣ್ಣಿನ ಬೆಳೆಗಳಾದ ಬಾಳೆ.ಮಾವು.ಪಪ್ಪಾಯ.ಸೀಬೆ ಹಾಗೂ ಹೊಸ ಪ್ರದೇಶ ವಿಸ್ತರಣೆ ಅಪ್ರದಾನ ಹಣ್ಣಿನ ಬೆಳೆಗಳಾದ ಬೆಣ್ಣೆ ಹಣ್ಣು ಹೊಸ ಪ್ರದೇಶ ವಿಸ್ತರಣೆ ಹೂವಿನ ಬೆಳೆಗಳಾದ ಸುಗಂಧರಾಜ.ಚೆಂಡುಹೂವು. ಸೇವಂತಿಗೆ. ಹಾಗೂ ಇತರೆ ಬಿಡಿ ಹೂವುಗಳ ಹೊಸ ಪ್ರದೇಶ ವಿಸ್ತರಣೆ ಹೈಬ್ರಿಡ್ ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಗೋಡಂಬಿ.ಕೋಕೋ.ಕಾಳುಮೆಣಸು ಬೆಳಗಳಿಗೆ ಹೊಸ ಪ್ರದೇಶ ವಿಸ್ತರಣೆ ವೈಯಕ್ತಿಕ ನೀರು ಸಂಗ್ರಹ ಘಟಕ ನಿರ್ಮಾಣಕ್ಕೆ ಸುರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಹೊದಿಕ್ಕೆ ಸಮಗ್ರ ಕೀಟ ಮತ್ತು ರೋಗ ಪೋಷಕಾಂಶಗಳ ನಿರ್ವಹಣೆ ಕೊಯ್ಲೊತರ ನಿರ್ವಹಣೆಗೆ ಎರೆಹುಳು ಗೊಬ್ಬರ ಉತ್ಪಾದನಾ ಘಟಕ ಮೊಬೈಲ್ ವೆಂಡಿಂಗ್ ಕಾರ್ಟ್ ಖರೀದಿಸಲು ನೆರವು ನೀಡಲಾಗುವುದು ಹಳೆಯ ತೋಟಗಳ ಪುನರ್ಶೇತನ ಮಿನಿ ಟ್ರಾಕ್ಟರ್ ಗಳಿಗೆ ಸಹಾಯಧನ ಈ ಯೋಜನೆಯಲ್ಲಿ ಮಾರ್ಗಸೂಚಿ ಅನ್ವಯ ವಿವಿಧ ಕಾರ್ಯಕ್ರಮಗಳನ್ನು ಆಧರಿಸಿ ಶೇಕಡ 25 ರಿಂದ 50ರಷ್ಟು ಸಹಾಯಧನ ನೀಡಲಾಗುವುದು ಆಸಕ್ತ ರೈತರು ಹಾಗೂ ಉದ್ದಿಮೆಗಾರರು ಅರ್ಜಿಯೊಂದಿಗೆ ಪಹಣಿ ಬೆಳೆ ದೃಢೀಕರಣ ಪ್ರತಿ ಬ್ಯಾಂಕ್ ಪಾಸ್ ಬುಕ್ ಪ್ರತಿ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ) ರೈತರಿಗೆ ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಮತ್ತು ಇತರೆ ದಾಖಲಾತಿಗಳನ್ನು ದಿನಾಂಕ 5.6.2025 ಒಳಗೆ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಅಥವಾ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸುವುದು ಅಥವಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಕುಣಿಗಲ್ ರವರನ್ನು ಸಂಪರ್ಕಿಸಬಹುದಾಗಿದೆ ಗುರಿಗೆ ಅನುಗುಣವಾಗಿ ಮಾರ್ಗಸೂಚಿ ಅನುಸಾರ ಫಲಾನುಭವಿಯನ್ನು ಜೇಷ್ಠತೆಯ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ವಿಜಯ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ