
ಕುಣಿಗಲ್ ತಾಲ್ಲೂಕು ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ!
ಕುಣಿಗಲ್ ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದಕ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ಅಹಿಂದ ವರ್ಗಗಳ ಸಮುದಾಯವನ್ನ ಸಾಮಾಜಿಕ.ಆರ್ಥಿಕ.ಹಾಗೂ ರಾಜಕೀಯವಾಗಿ ಸಧೃಡಗೋಳಿಸುವ ಉದ್ದೇಶದಿಂದ 2019-20 ನೇ ಸಾಲಿನಲ್ಲಿ ಅಹಿಂದ ವರ್ಗಗಳ ಒಕ್ಕೂಟವನ್ನು ಸಂಘಟಿಸಲಾಯಿತು ಅಹಿಂದ ವರ್ಗಗಳ ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬಿ ಪ್ರೋತ್ಸಾಹಿಸಲು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಸಲುವಾಗಿ ಜೂನ್ 29 ರಂದು ಪಟ್ಟಣದ ನಕ್ಷತ್ರ ಪ್ಯಾಲೇಸ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು 2025-26 ನೇ ಸಾಲಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇಕಡ 85 ಕ್ಕೂ ಹೆಚ್ಚು ಅಂಕ ಪಡೆದಿರುವ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಮ್ಮಿಕೋಳ್ಳಲಾಗಿದೆ ಜೂನ್ 20 ರ ಒಳಗಾಗಿ ಅಹಿಂದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮುತ್ತು ಪಿಯುಸಿ ಅಂಕಪಟ್ಟಿ.ಆಧಾರ್ ಕಾರ್ಡ್.ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಪುರಸಭಾ ಕಟ್ಟಡದಲ್ಲಿರುವ ಅಹಿಂದ ಸಂಪರ್ಕ ಕಚೇರಿಗೆ ಅರ್ಜಿಗಳನ್ನು ಸಲ್ಲಿಸುವಂತೆ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಹಿಂದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗೆ 9448088329/ 9886933214 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ ಈ ವೇಳೆ ಒಕ್ಕೂಟದ ಹಲವರು ಉಪಸ್ಥಿತರಿದ್ದರು@publicnewskunigal