
ಚಿಕ್ಕಮಾವತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಉದ್ಘಾಟಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚಿಕ್ಕಮಾವತ್ತೂರು ಗ್ರಾಮದಲ್ಲಿ ಸುಮಾರು ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಭಾನುವಾರ ಶಾಸಕ ಡಾ.ರಂಗನಾಥ್ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರ ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಇಪ್ಪತೈದು ಲಕ್ಷಕ್ಕೂ ಹೆಚ್ಚಿನ ಅನುದಾನ ನಿಡಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ನಿಡಲಾಗುವುದು ಎಂದರು ಬಳಿಕ ಗ್ರಾಮದ ಮಹಿಳೆಯೊರೊಂದಿಗೆ ಮಾತನಾಡಿ ಗ್ಯಾರಂಟಿ ಯೋಜನೆಯು ಗ್ರಾಮದ ಪ್ರತಿ ಮನೆಗೆ ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು ಸಂತಸ ವ್ಯಕ್ತಪಡಿಸಿದ ಶಾಸಕರು ಮುಂದಿನ ದಿನಗಳಲ್ಲಿ ವಸತಿ ಯೋಜನೆಯಡಿ ಅರ್ಹರಿಗೆ ಮನೆ ನಿಡಲಾಗುವುದು ಎಂದರು ಈ ವೇಳೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯೆ ಧನಲಕ್ಷ್ಮಿ ಶಿವಕುಮಾರ್ .ನಂಜುಂಡಪ್ಪ.ರಾಮಣ್ಣ.ಮುನಿಸ್ವಾಮಯ್ಯ.ಲಿಂಗರಾಜು.ಸುಂದರ್.ರಘು.ಗಂಗಾಧರ.ಶ್ರೀಧರ್ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು@publicnewskunigal