
ಬೆಂಗಳೂರು:ಆರ್.ಸಿ.ಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣ ಮಗನ ಸಾವಿನ ನೊವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ ಮೊಮ್ಮಗನ ಸಾವಿನ ನೊವಲ್ಲೆ ಕೊನೆಯುಸಿರೆಳೆದ ಅಜ್ಜಿ!
ಕುಣಿಗಲ್ ತಾಲ್ಲೂಕಿನ ಯಡಿಯೂರು ವ್ಯಾಪ್ತಿಯ ನಾಗಸಂದ್ರ ಗ್ರಾಮದ ಮನೋಜ್ ಸಾವು ಹಿನ್ನೆಲೆ ಆನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮನೋಜ್ ಅಜ್ಜಿ ದೇವಿರಮ್ಮ (70) ಮೊಮ್ಮಗನ ಸಾವಿನ ನೊವಿನಲ್ಲೆ ಇದಿಗ ಕೊನೆಯುಸಿರೆಳೆದಿದ್ದಾರೆ ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್ ಯಲಹಂಕದಲ್ಲಿ ತಂದೆ.ತಾಯಿ ಹಾಗೂ ತಂಗಿಯ ಜೋತೆಯಲ್ಲಿ ವಾಸವಿದ್ದ ಹದಿನೆಂಟು ವರ್ಷಗಳ ಬಳಿಕ ಆರ್.ಸಿ.ಬಿ ತಂಡ ಜಯಗಳಿಸಿದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವಿಜಯೋತ್ಸವ ಆಚರಣೆಯಲ್ಲಿ ಭಾಗಿಯಾಗಲು
ಸ್ನೇಹಿತರೊಂದಿಗೆ ತೆರಳಿದ್ದ ಈ ವೇಳೆ ನಡೆದ ಕಾಲ್ತುಳಿತದಲ್ಲಿ ಸಿಲುಕಿ ಮನೋಜ್ ಸಾವನ್ನಪ್ಪಿದ್ದ ಆನಾರೋಗ್ಯದಿಂದ ಮೊದಲೆ ಹಾಸಿಗೆ ಹಿಡಿದಿದ್ದ ಅಜ್ಜಿ ದೇವಿರಮ್ಮ ಮೊಮ್ಮಗನ ಅಗಲಿಕೆಯ ನೊವಿನಲ್ಲೆ ಕೊನೆಯುಸಿರೆಳೆದಿದ್ದು ಸೋಮವಾರ ನಾಗಸಂದ್ರ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆದಿದೆ ಮೃತ ಮನೋಜ್ ಕುಟುಂಬಕ್ಕೆ ನೆನ್ನೆಯಷ್ಟೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸರ್ಕಾರದಿಂದ ಇಪ್ಪತೈದು ಲಕ್ಷ ರೂಪಾಯಿಯ ಪರಿಹಾರದ ಚೆಕ್ ವಿತರಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದರು ಮನೋಜ್ ಸಾವಿನಿಂದ ನೊವಿನಲ್ಲಿದ್ದ ಕುಟುಂಬಸ್ಥರಿಗೆ ಮತ್ತೊಂದು ಸಾವಿನಿಂದ ಆಘಾತವಾಗಿದ್ದು ಒಂದೆ ವಾರದಲ್ಲಿ ಎರಡು ಸಾವುಗಳಾಗಿರುವ ಕಾರಣ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ @publicnewskunigal