
ಹೊಸಕೆರೆ ಗ್ರಾಮದ ಶ್ರೀ ಹೊನ್ನರಳಿಯಮ್ಮ ಹುಚ್ಚಮ್ಮ ದೇವಿಯ ಮಂಡಲದ ಪೂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು!
ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ಜಿನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಕೆರೆ ಗ್ರಾಮದಲ್ಲಿ ಇತ್ತಿಚೆಗೆ ನೂತನವಾಗಿ ನಿರ್ಮಿಸಿರುವ ಶ್ರೀ ಹೊನ್ನರಳಿಯಮ್ಮ ಹಾಗೂ ಹುಚ್ಚಮ್ಮ ದೇವರುಗಳ ನಲವತ್ತ ಎಂಟನೆದಿನದ ಮಂಡಲದ ಪೂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿ ದೇವಾಲಯದಲ್ಲಿ ಮಾಡಲಾಗಿದ್ದ ಅನ್ನ ಪ್ರಸಾದವನ್ನು ಸ್ವೀಕರಿಸಿದರು ಮಂಡಲಪೂಜೆಯ ಅಂಗವಾಗಿ

ಗ್ರಾಮದ ಮುಖಂಡರಾದ ಹೆಚ್.ಆರ್ ವಿಜಯ್ ಕುಮಾರ್ ಹಾಗೂ ಹೊಸಕೆರೆ ದಿನೇಶ್ ಗೌಡ್ರು ನೆತೃತ್ವದಲ್ಲಿ ನಡೆದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದ ವೇಳೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ನಟರಾಜ ಶೇಟ್ಟಿ ರವರನ್ನು ಸನ್ಮಾನಿಸಿ ಅಭಿನಂದೀಸಲಾಯಿತು ಕಾರ್ಯಕ್ರಮದಲ್ಲಿ ಬಿಜೆಪಿ ಡಿ.ಕೃಷ್ಣಕುಮಾರ್.ಹಾಗೂ ಹೆಚ್.ಡಿ ರಾಜೇಶ್ ಗೌಡ.ತಾಲ್ಲೂಕು ಜೆಡಿಎಸ್ ಮುಖಂಡ ಡಾ.ರವಿ ಡಿ.ನಾಗರಾಜಯ್ಯ.ಅಮೃತೂರು ಜೆಡಿಎಸ್ ಮುಖಂಡ ಆನಂದ್. ಸಿ.ಡಿ ಶೇಖರ್.ನ್ಯೂ ಸಿಟಿ ಟೂರ್ ಅಂಡ್ ಟ್ರಾವಲ್ಸ್ ಮಾಲೀಕರಾದ ಸುರೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು @publicnewskunigal