
ಕುಣಿಗಲ್ ಸುದ್ದಿ;-ಚೌಡನಕುಪ್ಪೆ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸುವಂತೆ ರೈತರ ಆಗ್ರಹ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮದಲ್ಲಿರುವ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ರೇಷ್ಮೆ ಬೆಳೆದ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯ ಕಾರಣದಿಂದ ರೇಷ್ಮೆ ಬೆಳೆದ ರೈತರಿಗೆ ವೈಜ್ಞಾನಿಕವಾಗಿ ಬೆಲೆ ಸಿಗದೆ ಸಮಸ್ಯೆಯಾಗಿದೆ ಮಾರುಕಟ್ಟೆಗೆ ಬರುವ ರಿಲರ್ಸ ಗಳು ಅಧಿಕಾರಿಗಳು ಸಾಮಿಲಾಗಿ ಸರಿಯಾದ ಹರಾಜು ಪ್ರಕ್ರಿಯೆ ನಡೆಸದೆ ಸಮಸ್ಯೆಯಾಗಿದ್ದು ರೇಷ್ಮೆ ಬೆಳೆಯನ್ನೆ ನಂಬಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿರುವ ರೈತರು ಬಿದಿಗೆ ಬಿಳುವ ಸ್ಥಿತಿಗೆ ಮಾರುಕಟ್ಟೆ ಅಧಿಕಾರಿಗಳು ಹಾಗೂ ರಿಲರ್ಸ್ ಗಳು ಕಾರಣವಾಗಿದ್ದಾರೆ ಇಲ್ಲಿನ ರೇಷ್ಮೆ ಮಾರುಕಟ್ಟೆ ದಲ್ಲಾಳಿಗಳ ನಿಯಂತ್ರಣದಲ್ಲಿದೆ ರಿಲರ್ಸ್ ಗಳು ಅಧಿಕಾರಿಗಳ ಜೇಬು ತುಂಬಿಸುತ್ತಿರುವ ಕಾರಣ ಕಡಿಮೆ ಬೆಲೆಗೆ ರೇಷ್ಮೆಗೂಡನ್ನು ಖರೀದಿ ಮಾಡುತ್ತಿದ್ದಾರೆ ಹಣ ನೀಡಿದವರ ರೇಷ್ಮೆಗೂನ್ನು ಬಿತ್ತನೆಗೆ ಪಡೆದರೆ ಉಳಿದ ರೈತರ ಪಾಡು ಹೇಳತಿರದಾಗಿದೆ
ಪ್ರತಿ ನೂರು ರೇಷ್ಮೆ ಮೊಟ್ಟೆಗೆ 35 ಕೆ.ಜಿ ಯಷ್ಟು ರೇಷ್ಮೆಗೂಡು ಬೇಳೆದರೆ ರೈತರಿಗೆ 365 ರೂಪಾಯಿ ಸಹಾಯಧನ ನೀಡಲಾಗುತ್ತಿತ್ತು ಹವಾಮಾನ ವೈಪರಿತ್ಯ ಕಾರಣದಿಂದ ಇಳುವರಿಯಲ್ಲಿ ಕುಠಿತವಾಗಿದ್ದು ಗೂಡು ಎಣಿಕೆ ಮಾಡುತ್ತಿರುವ ಕಾರಣ ರೈತರಿಗೆ ಸರ್ಕಾರ ನಿಗದಿಪಡಿಸಿರುವ ಸಹಾಯಧನ 120 ಹಾಗೂ ಬೌನಸ್ 245 ಸೆರಿದಂತೆ ಒಟ್ಟು 365 ರೂಪಾಯಿ ಸಹಾಯಧನ ರೈತರ ಕೈತಪ್ಪುತ್ತಿರುವುದು ಒಂದೆಡೆ ಯಾದರೆ ಇಳುವರಿ ಬಂದಿರುವ ರೈತರಿಗೆ ಬೆರೆಯವರಿಂದ ರೇಷ್ಮೆ ಗೂಡು ಪಡೆದು ಮಾರುಕಟ್ಟೆಗೆ ತಂದಿರುವೆ ಎಂದು ಪರಿಶೀಲನೆ ನಡೆಸಿದ್ದಲ್ಲದೆ ಮನೆಯ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡುವಂತೆ ಮಾರುಕಟ್ಟೆಯ ಅಧಿಕಾರಿ ಶಂಕರ್.ಒತ್ತಾಯ ಮಾಡುತ್ತಾರೆ ಅಧಿಕಾರಿಗಳಿಗೆ ಹಣ ನೀಡಿದರೆ ಯಾವುದೆ ಸಮಸ್ಯೆಯೆ ಉದ್ಬವಿಸುವುದಿಲ್ಲ ಎಲ್ಲಾ ಸರಿಯಾಗಿ ಇದ್ದರು ಕೂಡ ಅಧಿಕಾದಿಗಳನ್ನು ಪ್ರಶ್ನೆ ಮಾಡಿದರೆ ಅಂತಹವರ ರೇಷ್ಮೆ ಗೂಡನ್ನೆ ಖರೀದಿ ಮಾಡುವುದಿಲ್ಲ ಎಂದು ಅಧಿಕಾರಿಗಳ ನಡೆಗೆ ಕೆಂಪನಹಳ್ಳಿ ಗ್ರಾಮದ ರೈತ ಮಹದೇವಯ್ಯ ಅಸಮಾಧಾನ ವ್ಯಕ್ತಪಡಿಸಿದರು,ಮಾರುಕಟ್ಟೆಯಲ್ಲಿ ರೈತರಿಗೆ ಕುಡಿಯಲು ನೀರಿಲ್ಲ ಶೌಚಾಲಯವು ಇಲ್ಲ ರೇಷ್ಮೆ ಗೂಡು ಇರಿಸಲು ಸರಿಯಾದ ವ್ಯವಸ್ಥೆ ಇಲ್ಲ ನೆಲದ ಮೇಲೆ ಗೂಡನ್ನು ಇಡುವ ಸ್ಥಿತಿ ನಿರ್ಮಾಣವಾಗಿದೆ ಇದಲ್ಲದೆ ಮಾರುಕಟ್ಟೆಯಲ್ಲಿ ಶಿವಣ್ಣ ಎಂಬಾ ಖಾಸಗಿವ್ಯಕ್ತಿಯನ್ನು ಕೆಲಸಕ್ಕೆ ಅಧಿಕಾರಿಗಳು ನೇಮಿಸಿಕೊಂಡಿದ್ದು ಅಧಿಕಾರಿಗಳು ಮಾರುಕಟ್ಟೆಗೆ ಬರುವ ಮುನ್ನ ರಿಲರ್ಸ್ ಗಳಿಗೆ ಇತ ರೇಷ್ಮೆ ಗೂಡನ್ನು ನೀಡುತ್ತಾನೆ ಹರಾಜು ಪ್ರಕ್ರಿಯೆಗೂ ಮೊದಲೆ ರಿಲರ್ಸ್ ಗಳಿಗೆ ರೇಷ್ಮೆಗೂಡನ್ನು ನೀಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರು ಹಾಗೂ ರೈತರು ದೂರು ನೀಡಿದರು ಇದುವರೆಗೆ ಕ್ರಮವಿಲ್ಲ ಮಾರುಕಟ್ಟೆ ಸಂಪೂರ್ಣವಾಗಿ ದಲ್ಲಾಳಿಗಳ ಹಿಡಿತದಲ್ಲಿದೆ ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಆಗ್ರಹಿಸಿದ್ದು ನಾಳೆ ಮಾರುಕಟ್ಟೆಗೆ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ರೈತರ ಸಮಸ್ಯೆ ಹಾಲಿಸದಿದ್ದರೆ ಮಾರುಕಟ್ಟೆಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಈ ವೇಳೆ ಮಹದೇವಯ್ಯ. ಶಿವರಾಮಯ್ಯ. ಲೋಕೇಶ್.ನಿಂಗಯ್ಯ. ಈಶ್ವರ್. ಮಂಜುನಾಥ್.ನಂದೀಶ್. ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal