
ಚಿರತೆಗೆ ಗುಂಡಿಟ್ಟು ಕೊಂದ ಕಿಡಿಗೇಡಿಗಳು ಒರ್ವನ ಬಂಧನ ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಹೊಡಘಟ್ಟ ಗ್ರಾಮದ ಬಳಿ ಹುತ್ರಿದುರ್ಗ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಚಿರತೆಯನ್ನು ಗುಂಡಿಟ್ಟು ಕೊಂದಿರುವ ಬಗ್ಗೆ ಸ್ಥಳಿಯರ ದೂರು ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಧಿಕಾರಿ ಜಗದೀಶ್ ನೆತೃತ್ವದ ಅಧಿಕಾರಿಗಳ ತಂಡ ಸಾವನ್ನಪ್ಪಿರುವ ನಾಲ್ಕು ವರ್ಷದ ಗಂಡು ಚಿರತೆಯ ಕಳೆಬರಹವನ್ನು ವಶಕ್ಕೆ ಪಡೆದು ಕೃತ್ಯ ಎಸಗಿರು ಹೊಡೆಘಟ್ಟ ಗ್ರಾಮದ ಒರ್ವ ಆರೋಪಿ ನಾರಾಯಣ ಎಂಬುವನನ್ನು ಬಂಧಿಸಲಾಗಿದ್ದು ರವಿಕುಮಾರ್ ಹಾಗೂ ಮೂರ್ತಿ ಎಂಬುವವರು ತಲೆ ಮರೆಸಿಕೊಂಡಿದ್ದಾರೆ

ಮೂವರ ವಿರುದ್ದ ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಚಿರತೆ ಸುತ್ತಮುತ್ತಲ ಗ್ರಾಮಗಳ ಬಳಿ ಆಗಾಗ ಬಂದು ಸಾಕು ಪ್ರಾಣಿಗಳ ಮೆಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿದ್ದ ಕಾರಣ ಆರೋಪಿಗಳು ಗುಂಡಿಟ್ಟಿದ್ದಲ್ಲದೆ ಚಿರತೆಯ ತಲೆಯ ಮೆಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಸ್ಥಳಕ್ಕೆ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಪಶು ವೈದ್ಯಾಧಿಕಾರಿ ಡಾ.ನವಿನ್ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ @publicnewskunigal