
ರಾಜ್ಯ ಸರ್ಕಾರ ತುರ್ತಾಗಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಜುಲೈ 2 ರಂದು ಪ್ರತಿಭಟನೆ!
ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕುಣಿಗಲ್ ತಾಲ್ಲೂಕು ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಮುಖಂಡರು ರಾಜ್ಯ ಸರ್ಕಾರ ಸ್ಥಗಿತಗೊಳಿಸಿರುವ ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸುವಂತೆ ಹಾಗೂ ತಾಲ್ಲೂಕಿನಾದ್ಯಂತ ನೆನೆಗುದಿಗೆ ಬಿದ್ದಿರುವ ನಾಲೆ ಕಾಮಾಗಾರಿಗಳನ್ನು ಪೂರ್ಣಗೊಳಿಸುವಂತೆ ಎಲ್ಲಾ ಕೆರೆಗಳಿಗೆ ಸಮಗ್ರವಾಗಿ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ಜುಲೈ 2 ರಂದು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಜಾತಾ ಮೂಲಕ ಬೃಹತ್ ಪ್ರತಿಭಟನೆಯನ್ನು ಅಮ್ಮಿಕೊಳ್ಳಲಾಗಿದೆ ಹಾಗೂ ಲಿಂಕ್ ಕೆನಾಲ್ ಯೋಜನೆಯನ್ನು ಡಿ.26 ನಾಲೆಗೆ ಸಂಪರ್ಕಿಸಿ ಯೋಜನೆಯನ್ನು ಪ್ರಾರಂಭಿಸಬೇಕು ಕುಣಿಗಲ್ ತಾಲ್ಲೂಕಿಗೆ ನಿಗದಿಯಾಗಿರುವ 3.3 ಟಿ.ಎಂ.ಸಿ ಹೊರತು ಪಡಿಸಿ ಮಾಗಡಿ ತಾಲ್ಲೂಕಿಗೆ ಯಾವ ಮೂಲದಿಂದ ನೀರನ್ನು ಹರಿಸಲು ಯೋಜನೆ ರೂಪಿಸಲಾಗಿದೆ ಎಂಬುದರ ಬಗ್ಗೆ ಶಾಸಕರು ಸ್ಪಷ್ಟಪಡಿಸಬೇಕು ಶ್ರೀರಂಗ ಏತನೀರಾವರಿ ಯೋಜನೆಯನ್ನು ಹುತ್ರಿದುರ್ಗ ಹೊಬಳಿಗೆ ಮಾತ್ರ ಸೀಮಿತ ಗೋಳಿಸಿ ಮಾಗಡಿ ತಾಲ್ಲೂಕಿಗೆ ನೀರು ಹರಿಸುವ ಸಲುವಾಗಿ ಕಲ್ಲನಾಯಕನಹಳ್ಳಿ ಗ್ರಾಮದ ಬಳಿ ಹಿರೆಕೆರೆಯಲ್ಲಿ ನಿರ್ಮಿಸಿರುವ ಪೈಪ್ ಲೈನ್ ತೆರವು ಮಾಡಬೇಕು ತಾಲ್ಲೂಕಿಗೆ ನಿಗದಿಯಾಗಿರುವ ನೀರು ತಾಲ್ಲೂಕಿಗೆ ಮಾತ್ರ ಸಿಮಿತವಾಗಬೇಕು ಲಿಂಕ್ ಕೆನಾಲ್ ಯೋಜನೆ ಪೂರ್ಣಗೊಳ್ಳುವ ಮೊದಲು ತಾಲ್ಲೂಕಿನ ಕೆರೆಗಳ ಸಂಪರ್ಕ ನಾಲೆ ಕಾಮಾಗಾರಿ ಪ್ರಾರಂಭವಾಗಬೇಕು ಎಂದು ಮುಖಂಡರು ತಿಳಿಸಿದರು ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್.ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್.ಕೆ.ಆರ್.ಎಸ್ ಪಕ್ಷದ ಮುಖಂಡ ರಘು ಜಾಣಗೆರೆ.ಜಿ.ಕೆ ನಾಗಣ್ಣ.ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು@publicnewskunigal