ಕುಣಿಗಲ್;-ಕಾಡುಹಂದಿ ಬೇಟೆಯಾಡಲು ಸಿಡಿಮದ್ದು ಇಟ್ಟಿದ್ದ ಆರೋಪಿಗಳ ಬಂಧನ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ನಿಂಗಿಕೊಪ್ಪಲು ಗ್ರಾಮದ ಬಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಕಾಡುಹಂದಿ ಇಡಿಯುವ ಸಲುವಾಗಿ ಸಿಡಿಮದ್ದನ್ನು ಇಡಲಾಗಿತ್ತು ಸೋಮವಾರ ತಡರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸಿಡಿಮದ್ದು ಸಿಡಿದ ಶಬ್ದ ಬಂದ ಕೂಡಲೆ ಸ್ಥಳಕ್ಕೆ ಹೊಗಿ ನೊಡಿದಾಗ ಸಿಡಿಮದ್ದಿನಿಂದ ಕಾಡುಹಂದಿ ಸಾವನ್ನಪ್ಪಿರುವುದು ಕಂಡು ಬಂದಿದೆ ಘಟನೆಯ ಬಗ್ಗೆ ತಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಕಾಡುಹಂದಿ ಸಾವನ್ನಪ್ಪಿದ ಸ್ಥಳದಲ್ಲಿ ಕ್ಯಾಮರ ಅಳವಡಿಸಿದ್ದರು

ಬೇಟೆಯಾಡಲು ಸಿಡಿಮದ್ದು ಇಟ್ಟಿದ್ದ ಆರೋಪಿಗಳು ಮಂಗಳವಾರ ಮುಂಜಾನೆ ಸಿಡಿಮದ್ದು ಇಟ್ಟಿದ್ದ ಸ್ಥಳಕ್ಕೆ ಬಂದು ಸಾವನ್ನಪ್ಪಿರುವ ಕಾಡುಹಂದಿಯನ್ನು ಕೊಂಡೊಯ್ಯುವ ವೇಳೆ ವಲಯ ಅರಣ್ಯಾಧಿಕಾರಿ ಜಗದೀಶ್ ನೆತೃತ್ವದ ಅರಣ್ಯಧಿಕಾರಿಗಳ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ನಾಗಮಂಗಲ ತಾಲ್ಲೂಕಿನ ಸುಭಾಷ್ ನಗರ ನಿವಾಸಿ ಶಂಕರ್ ನಾಗ್ (23) ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ 28 ಸಿಡಿಮದ್ದುಗಳನ್ನು ವಶಕ್ಕೆ ಪಡೆದು ಹುಲಿಯೂರುದುರ್ಗ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ ಕಾರ್ಯಚರಣೆ ವೇಳೆ ಸಿಡಿಮದ್ದು ಸಿಡಿದು ಅರಣ್ಯ ಇಲಾಖೆ ಸಿಬ್ಬಂದಿಯ ದ್ವಿಚಕ್ರ ವಾಹನದ ಟಯರ್ ಕೂಡ ಸ್ಪೋಟಗೊಂಡಿದೆ ಇನ್ನೂ ಪ್ರಕರಣ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು ಅಮೃತೂರು ಸಿಪಿಐ ಮಾಧ್ಯನಾಯಕ್ ನೆತೃತ್ವದಲ್ಲಿ ವಿಧಿವಿಜ್ಙಾನ ಪಯೋಗಲಾಯ ತಂಡ ಸ್ಥಳಕ್ಕೆ ಬೆಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಈ ವೇಳೆ ವಲಯ ಅರಣ್ಯಧಿಕಾರಿ ಪಿ.ಜಗದೀಶ್.ಹುಲಿಯೂರುದುರ್ಗ ಪಿ.ಎಸ್.ಐ ಪ್ರಶಾಂತ್.ಪಶುವೈದ್ಯಾಧಿಕಾರಿ ಡಾ.ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ಧರು @publicnewskunigal