ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದಲ್ಲಿ ಗಿಡಗಳನ್ನು ನೆಟ್ಟು ಶಾಸಕರ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ಮುಖಂಡರು!
ಕುಣಿಗಲ್ ತಾಲ್ಲೂಕಿನ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗದಲ್ಲಿ ಐದುನೂರು ಹೊಂಗೆ ಗಿಡಗಳನ್ನು ನೆಡುವ ಮೂಲಕ ಕಾಂಗ್ರೆಸ್ ಮುಖಂಡರು ವಿನೂತನ ರೀತಿಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ರವರ ಹುಟ್ಟುಹಬ್ಬವನ್ನು ಆಚರಿಸಿದರು ಸಂತೆಪೇಟೆ ಗ್ರಾಮದಲ್ಲಿ ಸೋಮವಾರ ಕೇಕ್ ಕತ್ತರಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮ ಹುತ್ರಿದುರ್ಗ ಬೆಟ್ಟ ಹೊಗುವ ರಸ್ತೆಯ ಎರಡು ಬದಿಯಲ್ಲಿ ಸಂತೆಪೇಟೆ ಗ್ರಾಮದಿಂದ ಹುತ್ರಿದುರ್ಗ ಬೆಟ್ಟದ ವರೆಗೆ ಹೊಂಗೆ ಗಿಡಗಳನ್ನು ನೆಡಲಾಯಿತು ಬಳಿಕ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು

ಈ ವೇಳೆ ಕಾಂಗ್ರೆಸ್ ಪ್ರಚಾರ ಸಮೀತಿಯ ಅಧ್ಯಕ್ಷ ಶಂಕರ್ ಮಾತನಾಡಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಡಾ.ರಂಗನಾಥ್ ರವರ ಹುಟ್ಟು ಹಬ್ಬ ಅವಿಸ್ಮರಣೀಯವಾಗಿರಲಿ ಎಂದು ಐತಿಹಾಸಿಕ ಪ್ರವಾಸಿತಾಣದಲ್ಲಿ ಗಿಡಗಳನ್ನು ನೆಡುವ ಕೆಲಸ ಮಾಡಲಾಗಿದೆ ಶಾಸಕರಿಗೆ ದೇವರು ಇನಷ್ಟು ಕೆಲಸ ಮಾಡುವ ಶಕ್ತಿ ನೀಡಲಿ ಅವರಿಗೆ ಉನ್ನತ ಸ್ಥಾನಮಾನ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು ಈ ವೇಳೆ ವೈದ್ಯಧಿಕಾರಿ ಸತೀಶ್ ಬಾಬು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಕೆಪಿ.ಸಿ.ಸಿ ಸದಸ್ಯ ಬೇಗೂರು ನಾರಾಯಣ್.ಪ್ರಚಾರ ಸಮೀತಿಯ ಅಧ್ಯಕ್ಷ ಶಂಕರ್.ಮುಖಂಡರಾದ ಹಾಲುವಾಗಿಲು ಸ್ವಾಮಿ.ಬೋರೇಗೌಡ.ಓಂಕಾರಗೌಡ.ಮೂರ್ತಿ.ಮೋಹನ್.ಶಿವರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal