ರಾಜ್ಯ ಹೆದ್ದಾರಿ 85ರ ಕೆಂಪಸಾಗರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿ ಅತ್ತೆ ಅಳಿಯ ಸಾವು!
ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಬೆಂಗಳೂರು ಸೋಮವಾರಪೇಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 85ರ ಕೆಂಪಸಾಗರ ಗ್ರಾಮದ ಬಳಿ ಬೆಂಗಳೂರಿ ನಿಂದ ಹುಲಿಯೂರುದುರ್ಗ ಮಾರ್ಗವಾಗಿ ನಾಗಮಂಗಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯ ಬಲಭಾಗದಲ್ಲಿ ಹೊಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ

ಮಾಗಡಿ ಕಡೆಗೆ ಪ್ರಯಾಣಿಸುತ್ತಿದ್ದ ಅರಳಕುಪ್ಪೆ ಗ್ರಾಮದ ಗಂಗಮ್ಮ (58) ಶಿವಣ್ಣ(45) ಎಂಬುವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಅತ್ತೆ ಅಳಿಯ ಸ್ಥಳದಲ್ಲೇ ಸಾವನ್ನಪ್ಪಿದ್ದು ಭೀಕರ ರಸ್ತೆ ಅಪಘಾತವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ ಗೌರಿ ಗಣೇಶ ಹಬ್ಬಕ್ಕೆ ಅತ್ತೆ ಗಂಗಮ್ಮನನ್ನು ಶಿವಣ್ಣ ಕರೆದೊಯ್ಯುವ ವೇಳೆ ಅವಘಡ ಸಂಭವಿಸಿದೆ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡಯ್ಯಲಾಗಿದೆ ಘಟನೆ ಸಂಭಂದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ @publicnewskunigal