ಭತ್ತದ ಪೈರು ಹಿಡಿದು ಕೆಸರು ಗದ್ದೆಗೆ ಇಳಿದು ರೈತರೊಂದಿಗೆ ಸೇರಿ ಭತ್ತದ ನಾಟಿ ಮಾಡಿದ ಶಾಸಕ ರಂಗನಾಥ್!
ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ವ್ಯಾಪ್ತಿಯ ಒಳಗೆರೆಪುರ ಗ್ರಾಮದಲ್ಲಿ ಭಾನುವಾರ ಶಾಸಕ ಡಾ.ರಂಗನಾಥ್ ಕೆಸರು ಗದ್ದೆಯಲ್ಲಿ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತದ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಇತ್ತಿಚೇಗಷ್ಟೆ ಮಾರ್ಕೋನಹಳ್ಳಿ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗಿತ್ತು ಬಳಿಕ ಅಮೃತೂರು ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು ಭಾನುವಾರ ಬಿಡುವು ಮಾಡಿಕೊಂಡ ಶಾಸಕರು ಒಳಗೆರೆಪುರ ಗ್ರಾಮದ ರೈತ ಜಯರಾಮಯ್ಯ ಎಂಬುವವರ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ರೈತರೊಂದಿಗೆ ಭತ್ತದ ಪೈರು ನಾಟಿ ಮಾಡಿದ ಶಾಸಕರು ಬಳಿಕ ಮಾತನಾಡಿದ ಈ ಹಿಂದೆ ನಮ್ಮ ತಾತ ಕೃಷಿ ಕೆಲಸ ಮಾಡುತ್ತಿದ್ದರು ಆದರೆ ನಮ್ಮ ತಂದೆ ವೈದ್ಯರಾದರು
ನಾನುಕೂಡ ವೈದ್ಯಕೀಯ ವೃತ್ತಿಗೆ ಬರಬೇಕಾಯಿತು ಆದರೆ ವೈದ್ಯ ವೃತ್ತಿಯಿಂದ ಸಮಾಜ ಸೇವೆಗೆ ಬಂದು ಇಗ ಕ್ಷೇತ್ರದಲ್ಲಿ ಎರಡನೆ ಭಾರಿಗೆ ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದು ರೈತರ ಬದುಕು ಹೇಗಿರಲಿದೆ ಎಂದು ತಿಳಿಯುವ ಕಾರಣದಿಂದ ಇಂದು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಭತ್ತದ ನಾಟಿ ಮಾಡಿ ರೈತರೊಂದಿಗೆ ಸಮಯ ಕಳೆದಿರುವುದು ನನಗೆ ಸಂತಸ ತಂದಿದೆ ಸರ್ಕಾರದಿಂದ ರೈತರಿಗೆ ಆರ್ಥಿಕ ಭದ್ರತೆ ಸಿಕ್ಕಿದ್ದರೆ ಕೃಷಿ ನೆಮ್ಮದಿಯ ಕೆಲಸ ಆತ್ಮತೃಪ್ತಿ,ಸಂತೋಷ,ನೆಮ್ಮದಿ, ಕಂಡುಕೊಳ್ಳಬಹುದು ಇಲ್ಲಿನ ನೆಮ್ಮದಿ ಎಲ್ಲು ಇಲ್ಲ ಸದ್ಯ ರೈತರು ಬಳಸುವ ರಸಗೋಬ್ಬರ ಕೀಟನಾಶಕಗಳ ಬೆಲೆಯನ್ನ ಕೇಂದ್ರ ಸರ್ಕಾರ ಕಡಿಮೆ ಮಾಡುವ ಮೂಲಕ ರೈತರಿಗೆ ಆಸರೆಯಾಗಬೇಕೆಂದು ಪ್ರಧಾನಿ ನರೇಂದ್ರಮೋದಿ ರವರಿಗೆ ಮನವಿ ಮಾಡುತ್ತೆನೆ ಎಂದರು ಬಳಿಕ ರೈತರೊಂದಿಗೆ ತೋಟದೊಳಗೆ ಕುಳಿತು ನಾಟಿ ಕೋಳಿ ಬಿಸಿ ರಾಗಿಮುದ್ದೆ ಉಟ ಸವಿದರು ಈ ವೇಳೆ ಮುಖಂಡರಾದ ಆಡಿಟರ್,ನಾಗರಾಜು ಜಯರಾಮಯ್ಯ,ಶ್ರೀನಿವಾಸ,ಜವರಯ್ಯ,ಕಿರಣ್, ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal