ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ನಿರ್ಮಾಣವಾಗಿ ಮೂರು ತಿಂಗಳು ಕಳೆದರು ಬಳಕೆಗೆ ಸಿಗದ ಸಾರ್ವಜನಿಕ ಶೌಚಾಲಯ!
ಕುಣಿಗಲ್ ಪಟ್ಟಣದ ಜಿ,ಕೆ,ಬಿ,ಎಂ,ಎಸ್ ಮೈದಾನದಲ್ಲಿ ಅಮೃತ್ 2.0 ಯೋಜನೆಯಡಿ ಸಾರ್ವಜನಿಕ ಬಳಕೆಗೆಂದು ಶೌಚಾಲಯ ನಿರ್ಮಿಸಿ ಮೂರು ತಿಂಗಳು ಕಳೆದರು ಸಹ ಇದುವರೆಗೂ ಸಾರ್ವಜನಿಕರ ಬಳಕೆಗೆ ಮಾತ್ರ ಸಿಕ್ಕಿಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಫ್ರೌಡಶಾಲಾ ವಿಭಾಗದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನ ಜಿ,ಕೆ,ಬಿ,ಎಂ,ಎಸ್ ಮೈದಾನದಲ್ಲಿ ಅಮ್ಮಿಕೋಳ್ಳಲಾಗಿದ್ದು ತಾಲ್ಲೂಕಿನ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಮಕ್ಕಳು ಕ್ರೀಡಾ ಕೂಟಕ್ಕೆ ಆಗಮಿಸಿದ್ದರು ಆದರೆ ಮಕ್ಕಳ ಬಳಕೆಗೆ ಶೌಚಾಲಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು
ಜಿ,ಕೆ,ಬಿ,ಎಂ,ಎಸ್ ಮೈದಾನದಲ್ಲಿ ವಾಯುವಿಹಾರಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ ಆದರೆ ಈ ಬಗ್ಗೆ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಕೃಷ್ಣ, ಹಾಗೂ ಪರಿಸರ ಇಂಜಿನಿಯರ್ ಚಂದ್ರಶೇಖರ್ ರವರನ್ನು ಪ್ರಶ್ನಿಸಿದರೆ ನಮಗೆ ಈ ಬಗ್ಗೆ ಮಾಹಿತಿ ಇಲ್ಲವೆಂದು ಹಾರಿಕೆ ಉತ್ತರ ನಿಡುತ್ತಾರೆ ಶೌಚಾಲಯ ನಿರ್ಮಾಣ ಮಾಡಿರುವ ಗುತ್ತಿಗೆದಾರನಿಗೆ ಬಿಲ್ ಪಾವತಿಯಾಗದ ಕಾರಣ ಕಾಮಗಾರಿ ಮುಗಿದರು ಸಹ ಬಳಕೆಗೆ ಮುಕ್ತಗೋಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ ಈ ಬಗ್ಗೆ ಶಾಸಕರು ಗಮನ ಹರಿಸಿ ಬೇಜವಾಬ್ದಾರಿಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದರ ಜೋತೆಗೆ ಸಾರ್ವಜನಿಕರ ಬಳಕೆಗೆ ಶೌಚಾಲಯವನ್ನ ಮುಕ್ತಗೋಳಿಸಬೆಕೆಂಬುದು ನಾಗರೀಕರ ಆಗ್ರಹವಾಗಿದೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ @publicnewskunigal