ಸಮಸ್ತ ಮಂಜುನಾಥನ ಭಕ್ತರೊಂದಿಗೆ ಕುಣಿಗಲ್ ನಿಂದ ಧರ್ಮಸ್ಥಳಕ್ಕೆ ಯಾತ್ರೆ ಶಾಸಕ ಡಾ.ರಂಗನಾಥ್!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ರಂಗನಾಥ್ ತಾಲ್ಲೂಕಿನ ಸಮಸ್ತ ಮಂಜುನಾಥನ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಶನಿವಾರ ಯಾತ್ರೆ ಕೈಗೊಳ್ಳಲಾಗಿದೆ ಎಂದರು ರಾಜಕೀಯ ಹೊರತುಪಡಿಸಿ ತಾಲ್ಲೂಕಿನಿಂದ ಮಂಜುನಾಥನ ದರ್ಶನಕ್ಕೆ ಆಶಿರ್ವಾದ ಪಡೆಯಲು ಬರುವ ಭಕ್ತರನ್ನು ದರ್ಶನಕ್ಕೆ ಕರೆದೊಯ್ಯಲಾಗುವುದು ಇತ್ತಿಚೇಗೆ ಧರ್ಮಸ್ಥಳದ ವಿಷಯದಲ್ಲಿ ಗೊಂದಲ ಮೂಡಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಒಡಕು ತರುವ ಕೆಲಸ ಮಾಡಲಾಗುತ್ತಿದೆ ಆ ಕಾರಣಕ್ಕಾಗಿ ತನಿಖೆ ನಡೆಸುತ್ತಿರುವುದು ನಡೆಯಲಿ ಭಕ್ತರು ಹಾಗೂ ಭಗವಂತನ ನಡುವೆ ಒಂದು ಬಾಂಧವ್ಯ ಜೋತೆಗೆ ನಂಬಿಗೆ ಗಟ್ಟಿಗೊಳಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರೆ ಮಾಡಲಾಗುತ್ತಿದೆ ಈಗ ಬಂದಿರುವ ಸವಾಲನ್ನು ಧರ್ಮಸ್ಥಳದ ಮಂಜುನಾಥ ಗೆದ್ದು ಬರುತ್ತಾನೆ ಎಂಬ ವಿಶ್ವಾಸವಿದೆ ಎಲ್ಲದಕ್ಕಿಂತ ಹೆಚ್ಚಿನದಾಗಿ ವಿರೇಂದ್ರ ಹೆಗ್ಗಡೆಯವರ ಬಗ್ಗೆ ಆಪಾರ ಗೌರವವಿದೆ ಶನಿವಾರ ತಾಲ್ಲೂಕಿನಿಂದ ಧರ್ಮಸ್ಥಳಕ್ಕೆ ತೆರಳಲು ಸುಮಾರು 350 ವಾಹನಗಳ ಇಗಾಗಲೆ ನೊಂದಣಿ ಮಾಡಲಾಗಿದೆ ಯಾವತ್ತು ಇರದಂತಹ ಗೊಂದಲಗಳನ್ನ ಧರ್ಮದ ಹೆಸರಿನಲ್ಲಿ ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ ಎಲ್ಲರೂ ಬದಲಾವಣೆ ಚಿಂತನೆಯಲ್ಲಿ ಹೊಗಬೇಕು ಎಂದು ಕೇಳಿಕೊಳ್ಳುತ್ತೆನೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಸಂಸ್ಕೃತಿಯನ್ನು ಕದಡಿ ಎಲ್ಲಾರ ಭಾವನೆಗಳ ಮೂಲಕ ರಾಜಕೀಯ ಮಾಡುವುದನ್ನು ಬಿಜೆಪಿ ಯವರು ಬಿಡಬೇಕು ಎಂದರು @publicnewskunigal