ಕುಣಿಗಲ್ ತೋಟದಲ್ಲಿ ರಾಗಿ ಪೈರು ನಾಟಿ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಅಜ್ಜಿ ಮೊಮ್ಮಗ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿರು ದಾರುಣ ಘಟನೆ ತಾಲ್ಲೂಕಿನ ಕಸಬಾ ಹೊಬಳಿ ವ್ಯಾಪ್ತಿಯ ಚೋಟ್ಟನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ ಲತಾ(51) ಹೆಮಂತ್ ಕುಮಾರ್(13) ಮೃತ ದುರ್ದೈವಿಗಳು ತೊಟಕ್ಕೆ ನಾಟಿ ಮಾಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ ತೋಟದ ಪಕ್ಕದಲ್ಲಿದ್ದ ತಂತಿ ಬೆಲಿಯಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಘಟನೆ ನಡೆದಿದೆ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಕುಟುಂಬಸ್ಥರ ಆಕ್ರಂದನ ಮನ ಮುಟ್ಟುವಂತಿತ್ತು @publicnewskunigal