ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಖ್ಯ ಅಂಗನವಾಡಿಗೆ ಮುಂಬಡ್ತಿ ಪತ್ರ ವಿತರಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 32 ಮಂದಿ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಮಖ್ಯ ಅಂಗನವಾಡಿಗೆ ಮುಂಬಡ್ತಿ ನೀಡಿ ಆದೇಶ ಪತ್ರವನ್ನು ವಿತರಿಸಿದರು ಈ ವೇಳೆ ಮಾತನಾಡಿದ ಶಾಸಕರು ಮುಂಬರು ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್,ಕೆ,ಜಿ ಯು,ಕೆ,ಜಿ ಆಂಗ್ಲಮಾಧ್ಯಮ ಪ್ರಾರಂಭವಾಗಲಿದ್ದು ಮಕ್ಕಳ ಕಲಿಕೆಗೆ ಅನುಗುಣವಾಗಿ ನೀವುಗಳು ಕೂಡ ಇಂಗ್ಲಿಷ್ ಭಾಷೆ ಕಲಿತು ಮಕ್ಕಳನ್ನು ತಳಮಟ್ಟದಿಂದಲೆ ಉತ್ತಮ
ರೀತಿಯಲ್ಲಿ ಶಿಕ್ಷಣ ನೀಡಬೇಕು ಇದರ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು ಈ ವೇಳೆ ಉಪನಿರ್ದೇಶಕ ಡಾ,ಸಿದ್ದರಾಮಣ್ಣ ಮಾತನಾಡಿ ಆಶ್ರಯ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೂ ನಿವೇಶನ ನೀಡುವಂತೆ ಎಲ್ಲಾ ಕಾರ್ಯಕರ್ತೆಯರ ಪರವಾಗಿ ಶಾಸಕರಿಗೆ ಮನವಿ ಮಾಡಿದರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಶಾಸಕರು ನಿವೇಶನ ಹಂಚುವ ಸಂದರ್ಭದಲ್ಲಿ ಪರಿಗಣಿಸುವುದಾಗಿ ತಿಳಿಸಿದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ,ಸಿದ್ದರಾಮಣ್ಣ,ಸಿಡಿಪಿಒ ಕಮಲ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು @publicnewskunigal