ನಿವೇಶನ ನೀಡಲು 300 ಎಕರೆ ಭೂಮಿ ಗುರುತು ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ತರಾಟೆ!
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಡಾ,ರಂಗನಾಥ್ ಅಧ್ಯಕ್ಷತೆಯಲ್ಲಿ ಆಶ್ರಯ ಯೋಜನೆಯ ಪ್ರಗತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು ಈ ವೇಳೆ ಶಾಸಕ ಡಾ,ರಂಗನಾಥ್ ಮಾತನಾಡಿ ತಾಲ್ಲೂಕಿನಲ್ಲಿ ಬಡವರು ನಿರ್ಗತಿಕನ್ನು ದೀನ ದಲಿತರು ಹಾಗೂ ವಸತಿ ವಂಚಿತರನ್ನು ಗುರುತಿಸಿ ಹತ್ತು ಸಾವಿರ ನಿವೇಶನ ನೀಡಬೇಕೆಂಬುದು ಮಾಜಿ ಸಂಸದ ಡಿ.ಕೆ ಸುರೇಶ್ ರವರ ಕನಸಾಗಿತ್ತು ತಾಲ್ಲೂಕಿನಲ್ಲಿ ಈಗಾಗಲೆ 300 ಎಕರೆ ಪ್ರದೇಶ ಭೂಮಿ ಗುರುತಿಸಲಾಗಿದ್ದು ನೂರು ಎಕರೆ ಭೂಮಿಯನ್ನು ಪಟ್ಟಣ ಪರಿರ್ವತನೆಯಡಿ ಅನುಮೊದನೆಯೊಂದಿಗೆ ನಿವೇಶನ ಹಂಚಲು ಸಿದ್ದಪಡಿಸಲಾಗಿದೆ ಬಡವರಿಗೆ ನಿವೇಶನ ನೀಡುವುದು ನನ್ನ ಗುರಿಯಾಗಿದೆ ನಿಗಧಿತ ಸಮಯದಲ್ಲಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ.ರಂಗನಾಥ್ ಸೂಚನೆ ನೀಡಿದರು ಪ್ರಗತಿ ಸಾಧಿಸದ ಕಂದಾಯ ನಿರೀಕ್ಷಕರು ಹಾಗೂ ಪಿಡಿಒ ಗಳಿಗೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಶಾಸಕರು ಹತ್ತು ದಿನಗಳ ಒಳಗಾಗಿ ಸಮಸ್ಯೆ ಇರುವ ಜಾಗಗಳಿಗೆ ಬೇಟಿ ನೀಡಿ ಅನುಭವದಲ್ಲಿರುವ

ಫಲನುಭವಿಗಳಿಗೆ ಮನ ಒಲಿಸಿ ಭೂಮಿ ಕಾಯ್ದಿರಿಸುವ ಕೆಲಸ ಮಾಡುವಂತೆ ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು ಪಡುವಗೆರೆ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೆ ನಿವೇಶನಕ್ಕಾಗಿ 78 ಮಂದಿ ಅರ್ಜಿ ಸಲ್ಲಿಸಿದು ಒಳಗೆರೆ ಪುರ ಗ್ರಾಮದಲ್ಲಿ ಇಗಾಗಲೆ 42 ನಿವೇಶನ ಸಿದ್ಧಪಡಿಸಲಾಗಿದೆ ಎಂದು ಸಭೆಗೆ ಪಿಡಿಒ ಮಾಹಿತಿ ನೀಡಿದರು ಕಂದಾಯ ಇಲಾಖೆಯ ಅಧಿಕಾರಿಗಳು ವಸತಿ ಯೋಜನೆಗೆ ಗುರುತಿಸಿರುವ ಭೂಮಿಯನ್ನು ಅಳತೆ ಮಾಡುವಲ್ಲಿ ವಿಳಂಬ ತೋರಿದ ಹಿನ್ನೆಲೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ತೋಂಟರಾಧ್ಯ,ರವರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು ಜಿಲ್ಲಾ ಉಪ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಸರ್ವೆ ಅಧಿಕಾರಿಗಳ ಕಾರ್ಯ ವೈಕರಿಗೆ ಅಸಮದಾನ ವ್ಯಕ್ತಪಡಿಸಿ ಶಾಸಕರು ಸರ್ವೆಯರ್ ನೇಮಿಸುವಂತೆ ಹಾಗೂ ತ್ವರಿತಗತಿಯಲ್ಲಿ ಅಳತೆ ಕಾರ್ಯ ಮುಗಿಸಲು ಸೂಚಿಸಿದರು ಸಭೆಯಲ್ಲಿ ತಹಶೀಲ್ದಾರ್ ರಶ್ಮಿ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತ್,ಭೂ ದಾಖಲೆಗಳ ಸಹಾಯಕ ನಿರ್ದೇಶಕ ತೋಂಟರಾಧ್ಯ,ಕಂದಾಯ ನಿರೀಕ್ಷಕರು ಹಾಗೂ ಪಿಡಿಒಗಳು ಸಭೆಯಲ್ಲಿ ಭಾಗಿಯಾಗಿದ್ದರು @publicnewskunigal