ಒಕ್ಕಲಿಗರು ಜಾತಿ ಗಣತಿಯಲ್ಲಿ ಭಾಗಿಯಾಗಿ ಉಪ ಜಾತಿಯ ಸಹಿತ ಜಾತಿ ನಮೂದಿಸುವಂತೆ ಸಿದ್ದರಾಮ ಚೈತನ್ಯ ಸ್ವಾಮಿಜಿ ಕರೆ!
ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅರೆಶಂಕರ ಮಠದ ಪೀಠಾಧಿಪತಿಗಳಾದ ಸಿದ್ದರಾಮ ಚೈತನ್ಯ ಸ್ವಾಮಿಜಿ ರಾಜ್ಯ ಸರ್ಕಾರ ಸೆಪ್ಟೆಂಬರ 22 ರಿಂದ ನಡೆಸಲಿರುವ ಜಾತಿ ಸಮೀಕ್ಷೆ ಮಹತ್ತರವಾಗಿದ್ದು ಒಕ್ಕಲಿಗರ ಜಾತಿ ಕಾಲಂ ನಲ್ಲಿ ತಮ್ಮ ಉಪಜಾತಿ ಸಮೇತ ಜಾತಿ ನಮೂದಿಸಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಗಣತಿಯಲ್ಲಿ ಒಕ್ಕಲಿಗ ಸಮುದಾಯದವರು ತಮ್ಮ ಉಪಜಾತಿಗಳಾದ ಗಂಗಡ್ಕರ್ ಒಕ್ಕಲಿಗ,ಮರಸು ಒಕ್ಕಲಿಗ,ದಾಸ ಒಕ್ಕಲಿಗ,ಎಂದು ಬರೆಸಲು ತಿಳಿಸಿದರು ಸರ್ಕಾರದ ಸವಲತ್ತು ಪಡೆಯಲು ಮೀಸಲಾತಿಗಾಗಿ ಉಪಜಾತಿ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದ್ದು ಸಮೀಕ್ಷೆಯ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಆಧಾರ್ ಕಾರ್ಡ್,ರೇಷನ್ ಕಾರ್ಡ್,ಇಟ್ಟುಕೊಂಡು ಸಮೀಕ್ಷೆಗೆ ಬರುವ ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ದಾಖಲಿಸುವಂತೆ ತಿಳಿಸಿದರು ಉಪ ಜಾತಿ ನಮೂದಿಸಿದರೆ ಒಟ್ಟಾರೆಯಾಗಿ ಒಕ್ಕಲಿಗರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಭಯ ಬೇಡ ಉಪ ಜಾತಿಗಳನ್ನು ಸೇರಿಸಿ ಒಟ್ಟು ಸಂಖ್ಯೆ ಲೆಕ್ಕಾ ಮಾಡಲಾಗುವುದು ಆದ್ದರಿಂದ ಯಾವುದೆ ಗೊಂದಲಗಳು ಬೇಡ ಎಂದರು ಪತ್ರಿಕಾಗೋಷ್ಠಿಯಲ್ಲಿ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಜಿ,ಬಾ.ನಾ ರವಿ, ತರೀಕೆರೆ ಪ್ರಕಾಶ್,ಬೇಗೂರು ರಾಮಣ್ಣ,ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ ಸೆರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal