ಭೀಕರ ರಸ್ತೆ ಅಪಘಾತ ದಂಪತಿಗಳಿಬ್ಬರಿಗೆ ಗಂಭೀರ ಗಾಯ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪತಿ ಸಾವನ್ನಪ್ಪಿದ್ದು ಪತ್ನಿ ಸ್ಥಿತಿ ಗಂಭೀರವಾಗಿರು ಘಟನೆ ನಡೆದಿದೆ!
ಕುಣಿಗಲ್ ಪಟ್ಟಣದ ವೈ.ಕೆ ರಾಮಯ್ಯ ಉದ್ಯಾನವನದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ ಕಟ್ಟಿಗೆಹಳ್ಳಿ ಗ್ರಾಮದ ನರಸಿಂಹಮೂರ್ತಿ (45) ಪತ್ನಿ ವಸಂತ (40) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ದಂಪತಿಗಳು ಕಟ್ಟಿಗೆಹಳ್ಳಿ ಗ್ರಾಮದ ನರಸಿಂಹಮೂರ್ತಿ ಕುಣಿಗಲ್ ಪಟ್ಟಣದ ಅಂಚೆಪಾಳ್ಯ ಕೈಗಾರಿಕಾ ಪ್ರದೇಶದ ಇಂಡೊಸ್ಯ್ಪಾನಿಸ್ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೊಗಿ ವಾಪಸ್ ಕಟ್ಟಿಗೆಹಳ್ಳಿ ಗ್ರಾಮಕ್ಕೆ ಪಟ್ಟಣದಲ್ಲಿದ್ದ ಪತ್ನಿ ಕರೆದುಕೊಂಡು ಹೊಗುತ್ತಿದ್ದ ವೇಳೆ ಕುಣಿಗಲ್ ಪಟ್ಟಣದ ಹಳೆಯ ರಾಷ್ಟ್ರೀಯ ಹೆದ್ದಾರಿ 48 ರ ವೈ.ಕೆ ರಾಮಯ್ಯ ಉದ್ಯಾನವನದ ಬಳಿ ಮಣ್ಣು ತುಂಬಿಕೊಂಡು ಹೊಗುತ್ತಿದ್ದ ಟಿಪ್ಪರ್ ಲಾರಿ ಯಾವುದೆ ಸೂಚನೆ ಇಲ್ಲದೆ ಏಕಾ ಏಕಿ ಎಡಕ್ಕೆ ತಿರುವು ತೆಗೆದುಕೊಂಡಿದೆ ಹಿಂಬದಿ ದ್ವಚಕ್ರ ವಾಹನದಲ್ಲಿ
ಬರುತ್ತಿದ್ದ ದಂಪತಿಗಳು ಟಿಪ್ಪರ್ ಲಾರಿ ಕೆಳಗೆ ಸಿಲುಕಿಕೊಂಡ ಕಾರಣ ನರಸಿಂಹಮೂರ್ತಿ ದೇಹ ಸಂಪೂರ್ಣ ನುಜ್ಜು ಗುಜ್ಜಾಗಿದೆ ಪತ್ನಿಗೆ ಕಾಲು ಮುರಿದಿದ್ದು ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು ಟಿಪ್ಪರ್ ಲಾರಿ ಚಾಲಕ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದು ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಪೊಲೀಸ್ ಠಾಣೆಯ ಎ.ಎಸ್.ಐ ಪ್ರಕಾಶ್ ಆಂಬುಲೆನ್ಸ್ ಚಾಲಕರ ನೆರವಿನೊಂದಿಗೆ ಮಾಂಸದ ಮುದ್ದೆಯಾಗಿದ್ದ ಗಾಯಾಳುವನ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವಿಯತೆ ಮೆರೆದಿದ್ದಾರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ನರಸಿಂಹ ಮೂರ್ತಿ ಸಾವನ್ನಪ್ಪಿದ್ದು ಪತ್ನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal