ತಮಕೂರಿನಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಗ್ರಹಣ ಕೇಂದ್ರ ಪ್ರಾರಂಭ ತುಮುಲ್ ಅಧ್ಯಕ್ಷ ಹೆಚ್.ವಿ ವೆಂಕಟೇಶ್ ಹೇಳಿಕೆ!
ಕುಣಿಗಲ್ ತಾಲ್ಲೂಕಿನ ಗವಿಮಠದ ಖಾಸಗಿ ಕಲ್ಯಾಣ ಮಂಟಪದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಕುಣಿಗಲ್ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆಯನ್ನು ಶನಿವಾರ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ವಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾನು ಅನಿರೀಕ್ಷಿತವಾಗಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷನಾಗಿ ಆಯ್ಕೆಯಾದೆ ಈ ಮೂಲಕ ರೈತರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ಸಂತಸ ತಂದಿದೆ ತುಮಕೂರು ಹಾಲು ಒಕ್ಕೂಟ ರೈತರ ಕಷ್ಟದಲ್ಲಿ ಜೋತೆಯಾಗಿ ನಿಲ್ಲಲಿದೆ ಜಿಲ್ಲೆಯಲ್ಲಿ ಕುಣಿಗಲ್ ತಾಲ್ಲೂಕು ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದೆ ಇದಕ್ಕೆ ಆರನೆ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿ.ಕೃಷ್ಣಕುಮಾರ್ ರವರ ಶ್ರಮವಿದೆ ಪ್ರಾರಂಭದ ದಿನಗಳಲ್ಲಿ ಎರಡು ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದ ಕುಣಿಗಲ್ ತಾಲ್ಲೂಕು ಪ್ರಸ್ತುತ ಒಂದು ಲಕ್ಷದ ಅರವತ್ತು ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಜಿಲ್ಲೆಗೆ ಮೊದಲನೆ ಸ್ಥಾನದಲ್ಲಿದೆ ಇಗಾಗಲೆ
250 ಕೋಟಿ ರೂಪಾಯಿ ವೆಚ್ಚದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಗ್ರಹಣ ಕೇಂದ್ರ ಪ್ರಾರಂಭಿಸಲಾಗಿದ್ದು ಕೆಲಸ ಪ್ರಗತಿಯಲ್ಲಿದೆ ಒಕ್ಕೂಟದ ವತಿಯಿಂದ ತುಮಕೂರಿನಲ್ಲಿ ಉತ್ಪಾದಕ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ 400 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಾಲು ಕೊಡುವ ರಾಸುಗಳು ಮರಣಿಸಿದಾಗ ನೀಡುತ್ತಿರುವ ಪರಿಹಾರವನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು ಒಕ್ಕೂಟ ಸದ್ಯ 21 ಕೋಟಿ ನಷ್ಟದಲ್ಲಿದೆ ಮಾರುಕಟ್ಟೆಯ ಪೈಪೋಟಿಯ ನಡುವೆ ಹೊರ ರಾಜ್ಯಗಳಿಗೆ ಹಾಲು ಪೂರೈಕೆ ಮಾಡಲಾಗುತ್ತಿದೆ ಗುಣಮಟ್ಟದ ಹಾಲು ನೀಡುವತ್ತ ರೈತರು ಗಮನ ಹರಿಸಬೇಕು ಹಾಲಿನ ದರ ಹೆಚ್ಚಳ ಕುರಿತು ಉಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು ತಾಲ್ಲೂಕು ನಿರ್ದೇಶಕ ಡಿ.ಕೃಷ್ಣಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ 160 ಉತ್ಪಾದಕರ ಸಂಘಗಳಿದ್ದು ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಕುಣಿಗಲ್ ತಾಲ್ಲೂಕು ಪ್ರಥಮ ಸ್ಥಾನದಲ್ಲಿರುವುದು ಸಂತಸ ತಂದಿದೆ ಇದಕ್ಕೆ ನಿಮ್ಮೆಲ್ಲರ ಶ್ರಮ ಕಾರಣ ಜೋತೆಗೆ ಒಕ್ಕೂಟ ಹೈನುಗಾರಿಕೆಗೆ ಉತ್ತೆಜನ ನಿಡ್ಡುತ್ತಿರುವುದು ಕಾರಣ ತಾಲ್ಲೂಕಿನಲ್ಲಿ 12 ಸಾವಿರ ಹಾಲು ಉತ್ಪಾದಕರಿದ್ದು 25 ಸಾವಿರ ಸದಸ್ಯರಿದ್ದಾರೆ ಪ್ರತಿ ತಿಂಗಳು ಕುಣಿಗಲ್ ತಾಲ್ಲೂಕಿಗೆ ಪ್ರತೀ ತಿಂಗಳು 19 ಕೊಟಿ ರೂಪಾಯಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದರು
ನಿಡಸಾಲೆ ಗ್ರಾಮದ ರೈತ ಯೊಗೇಶ್ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಹಾಲಿನ ದರ ಕುಸಿಯುತ್ತಿದೆ ಆದರೆ ಮಧ್ಯದ ಬೆಲೆ ಮೂರು ಪಟ್ಟು ಹೆಚ್ಚಾಗಿದ್ದು ಇದರಿಂದ ರೈತರಿಗೆ ಸಮಸ್ಯೆಯಾಗಿದೆ ಹಾಗೂ ರಾಸುಗಳು ಮರಣ ಹೊಂದಿದ ವೇಳೆ ಇಗ ನೀಡುತ್ತಿರುವ ವಿಮಾ ಹಣವನ್ನು ಒಂದು ಲಕ್ಷಕ್ಕೆ ಹೆಚ್ಚಿಸುವಂತೆ ಒಕ್ಕೂಟದ ಅಧ್ಯಕ್ಷರಿಗೆ ರೈತರ ಪರವಾಗಿ ಮನವಿ ಮಾಡಿದರು
ಕಾರ್ಯಕ್ರಮದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಸಂಘಗಳಿಗೆ ಅಭಿನಂದನ ಪತ್ರ ವಿತರಿಸಲಾಯಿತು ಎಸ್.ಎಸ್.ಎಲ್.ಸಿ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಪುರಸ್ಕಾರ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಡಿ.ಕೃಷ್ಣಕುಮಾರ್,ಎಸ್.ಆರ್ ಗೌಡ,ಚಂದ್ರಶೇಖರ್,ಹಾಗೂ ತುಮುಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್. ಉಪ ವ್ಯವಸ್ಥಾಪಕಿ ನವ್ಯಶ್ರೀ.ವಿಸ್ತರಣಾಧಿಕಾರಿ ದೀಪಕ್.ವನಜಾಕ್ಷಿ. ಸಮಾಲೊಚಕ ಸುದರ್ಶನ್ ಹಾಗೂ ಹಾಲು ಉತ್ಪಾದಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal