ಪುರಸಭೆಯಲ್ಲಿ ಅಹಿಂದ ವರ್ಗಗಳ ಸದಸ್ಯರ ಕಡೆಗಣನೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಆಸ್ಮಾ ಬಾನು ಆಕ್ರೋಶ!
ಕುಣಿಗಲ್ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷರು ಅಹಿಂದ ವರ್ಗಗಳ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಪುರಸಭೆಯಲ್ಲಿ ನಡೆಯುವ ಅನ್ಯಾಯ ಅಕ್ರಮಗಳಿಗೆ ನಾವು ಬಲಿಯಾಗುತ್ತಿದ್ದೇವೆ ಶಾಸಕರು ಸೂಚಿಸಿದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಸ್ಮಾ ಬಾನು ಸೋಮವಾರ ತೀವ್ರ ಆಕ್ರೋಶ
ವ್ಯಕ್ತಪಡಿಸಿದರು ಪಟ್ಟಣದ ಪುರಸಭೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಸಿ ಮಾತನಾಡಿ,ಪುರಸಭೆ ಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಅಕ್ರಮ ಅವ್ಯವಹಾರಗಳೇ ಹೆಚ್ಚಾಗುತ್ತಿವೆ ಇವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕೆಲವು ಸದಸ್ಯರು ಲೆಕ್ಕಕ್ಕಿಲ್ಲ ದಂತಾಗಿದೆ. ಪಟ್ಟಣದ 23 ವಾರ್ಡ್ ಗಳಲ್ಲಿ ಕೇವಲ 3-4 ವಾರ್ಡ್ ಗಳ ಸದಸ್ಯರ ಕೆಲಸ ಗಳಾಗುತ್ತಿವೆ ಅವಶ್ಯಕತೆ ಇರುವ ಕಡೆಗಳಲ್ಲಿ ಮೂಲಭೂತ ಸೌಕರ್ಯ ನೀಡಲು ಅಧ್ಯಕ್ಷರು ರಾಜಕೀಯ ಮಾಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು
ಸ್ಥಾಯಿ ಸಮಿತಿ ಅಧ್ಯಕ್ಷರ ಸಹಿ ಇಲ್ಲದೆ ಪಂಪು ಮೋಟರ್ ಖರೀದಿಸಲು 86,000, ಪ್ಯಾನಲ್ ಬೋರ್ಡ್ ಮತ್ತು ವೈರ್ ಖರೀದಿಸಲು 75000, ಕೇಬಲ್ ಖರೀದಿಸಲು 46000, ಮೋಟ ರಿವೈಂಡಿಂಗ್ ಮಾಡಲು 96,000, ಬಿಲ್ಲುಗಳಾಗಿವೆ. 12 ಲಕ್ಷ ಬೆಲೆಬಾಳುವ ಟಾಟಾ ಎಸಿ ವಾಹನ 15 ಲಕ್ಷಕ್ಕೆ ಖರೀದಿಸಲು , ಪಟ್ಟಣದಲ್ಲಿ ಎಲ್ ಇ ಡಿ ಸ್ಕ್ರೀನ್ ಅಳವಡಿಸಲು 26 ಲಕ್ಷ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಕ್ರೀನಿಂಗ್ ಯಂತ್ರ ಖರೀದಿಸಲು 25 ಲಕ್ಷ ಯಾರಿಗೂ ಗೊತ್ತಾಗದ ಹಾಗೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಸೇರಿಕೊಂಡು ಬಿಲ್ ಮಾಡಲು ಪ್ರಯತ್ನ ನಡೆಸುತ್ತಿದ್ದರು ಅದನ್ನು ನಾವು ತಡೆಹಿಡಿದಿದ್ದೇವೆ ಎಂದರು.
ಪುರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ಪುರಸಭೆಯ ಇತಿಹಾಸದಲ್ಲೇ ಯಾವ ಅಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರನ್ನ ಕಡೆಗಣಿಸಿರಲಿಲ್ಲ. ಪ್ರತಿಯೊಂದಕ್ಕೂ ಸ್ಥಾಯಿ ಸಮಿತಿ ಅಧ್ಯಕ್ಷರ,ಮತ್ತು ಉಪಾಧ್ಯಕ್ಷರ, ಸದಸ್ಯರ ಸಹಕಾರ ಪಡೆಯುತ್ತಿದ್ದರು. ಆದರೆ ಈ ಅಧ್ಯಕ್ಷರಿಗೆ ಮಾತ್ರ ಸ್ಥಾಯಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲವು ಸದಸ್ಯರುಗಳು ಇವರಿಗೆ ಲೆಕ್ಕಕ್ಕೇ ಇಲ್ಲ ಇದು ಇವರ ದುರಾಡಳಿತಕ್ಕೆ ಕೈಗನ್ನಡಿ ಯಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ಕೃಷ್ಣ ಇದ್ದರು @publicnewskunigal