ತೆಪ್ಪಸಂದ್ರ ಗ್ರಾಮದ ಶ್ರೀ ಲಕ್ಷಿನರಸಿಂಹಸ್ವಾಮಿ ದೇವಾಲಯದಲ್ಲಿ ಬೀಗ ಮುರಿದು ಕಳವು ಮಾಡಲು ಯತ್ನ ದೃಶ್ಯ ಸಿ.ಸಿ ಕ್ಯಾಮರದಲ್ಲಿ ಸೇರೆ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಕಸಬಾ ಹೊಬಳಿ ವ್ಯಾಪ್ತಿಯ ತೆಪ್ಪಸಂದ್ರ ಗ್ರಾಮದ ಶ್ರೀ ಲಕ್ಷಿನರಸಿಂಹಸ್ವಾಮಿ ದೇವಾಲಯದಲ್ಲಿ ಕಳೆದ ಭಾನುವಾರ ತಡರಾತ್ರಿ ದೇವಾಲಯದ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ನಡೆದಿದೆ ದೇವಾಲಯದಲ್ಲಿ ಅಳವಡಿಸಿರುವ ಸೈರನ್ ಶಬ್ದಕ್ಕೆ ಹೆದರಿ ಸ್ಥಳದಿಂದ ಕಳ್ಳರು ಪರಾರಿಯಾಗಿದ್ದು ಕಳವಿಗೆ ಯತ್ನಿಸಿರುವ ಘಟನೆ ದೇವಾಲಯಕ್ಕೆ ಅಳವಡಿಸಿರುವ ಸಿ.ಸಿ ಕ್ಯಾಮರದಲ್ಲಿ ಸೇರೆಯಾಗಿದೆ ಕಳೆದೊಂದು ವರ್ಷದ ಅವಧಿಯಲ್ಲಿ ಇದೆ ದೇವಾಲಯದಲ್ಲಿ ಹತ್ತಕ್ಕೂ ಹೆಚ್ಚುಬಾರಿ ಹುಂಡಿ ಕಳವಾಗಿದೆ
ಆದರೆ ಇದುವರೆಗು ಕಳ್ಳರು ಮಾತ್ರ ಪತ್ತೆಯಾಗಿಲ್ಲ ಕಳೆದ ಎರಡು ತಿಂಗಳ ಹಿಂದಷ್ಟೆ ಭಕ್ತರೊಬ್ಬರು ದೇವಾಲಕ್ಕೆ ಸಿ.ಸಿ ಕ್ಯಾಮರ ಅಳವಡಿಸಿದ್ದಾರೆ ಬಳಿಕ ಕಳ್ಳತನಕ್ಕೆ ಯತ್ನಿಸಿರುವುದು ಕಂಡುಬಂದಿದೆ ಈ ಸಂಬಂಧ ಸ್ಥಳಿಯ ಗ್ರಾಮ ಲೆಕ್ಕಾಧಿಕಾರಿ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮಂಗಳವಾರ ಠಾಣೆಯ ಮುಂದೆ ಜಮಾಹಿಸಿದ ಗ್ರಾಮಸ್ಥರು ಕಳ್ಳತನಕ್ಕೆ ಯತ್ನಿಸಿರುವವರ ಬಗ್ಗೆ ಸುಳಿವು ನೀಡಿ ಆತನನ್ನ ಬಂಧಿಸಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದರು ಈ ವೇಳೆ ಠಾಣೆಯ ಸಿಪಿಐ ನವೀನ್‌ಗೌಡ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು @publicnewskunigal