ಗ್ರಾಮೀಣ ಭಾರತದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಶಕ್ತಿಯಾಗಿವೆ ಸಂಸದ ಡಾ,ಮಂಜುನಾಥ್!
ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯ ಜಿನ್ನಾಗರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಂಠನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ,ಸಿ.ಎನ್. ಮಂಜುನಾಥ್ ರವರು ಭಾಗಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಕ್ಷೇತ್ರವು ಗ್ರಾಮೀಣ ಭಾರತದ ಹೃದಯವಾಗಿದೆ ವಿಶೇಷವಾಗಿ ರೈತರ ಬದುಕನ್ನು ಬದಲಾಯಿಸುವ ಪ್ರಮುಖ ಶಕ್ತಿಯಾಗಿದೆ ಕೇಂದ್ರ ಸರ್ಕಾರದ ಸಹಕಾರಿ ವಲಯದಲ್ಲಿನ ಹಲವು ಕಾರ್ಯಕ್ರಮಗಳ ಬಗ್ಗೆ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ರೈತರಿಗೆ ಬ್ಯಾಂಕಿಂಗ್ ಮತ್ತು ಹಣಕಾಸಿನ ನೇರ ಸಹಾಯವನ್ನು ನೀಡುವ ಪ್ರಮುಖ ಸಂಸ್ಥೆಗಳಾಗಿವೆ ಇವು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸುವುದರೊಂದಿಗೆ, ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ಸುಲಭವಾಗಿ ಪಡೆಯಲು ಸಹಕರಿಸುತ್ತವೆ ರೈತರ ಹೊಲದ ಉತ್ಪಾದನೆ ಹೆಚ್ಚಿಸಲು ಹಾಗೂ ಬದುಕು ಸುಧಾರಿಸಲು ಸಹಕಾರ ಸಂಘಗಳು ಶಕ್ತಿಯುತ ಸಾಧನವಾಗಿವೆ ಪ್ರತಿ ಗ್ರಾಮದಲ್ಲಿಯೂ ರೈತರು ಒಗ್ಗಟ್ಟಾಗಿ ಸಹಕಾರ ಸಂಘವನ್ನು ಬಲಪಡಿಸಿದರೆ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗುತ್ತದೆ ಸರ್ಕಾರ ಸಹಕಾರ ಸಂಘಗಳ ಮೂಲಕ ರೈತರಿಗೆ ನೇರವಾಗಿ ಸಬ್ಸಿಡಿ, ಧಾನ್ಯದ ಖರೀದಿ ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆ ಮೂಲಕ ರೈತರ ಆತ್ಮಹತ್ಯೆ ಸಮಸ್ಯೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದರು ಇಂದಿನ ಯುವಕರು ಸಹ ಸಹಕಾರ ಸಂಘಗಳ ಮೂಲಕ ಉದ್ಯಮಶೀಲತೆಗೆ, ಹಾಲು ಉತ್ಪಾದನೆ, ಪಶುಸಂಗೋಪನೆ ಮತ್ತು ಸಣ್ಣ ಕೈಗಾರಿಕೆಗಳ ಕಡೆಗೆ ಮುಂದಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂದರುಈ ಸಂದರ್ಭದಲ್ಲಿ ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆ.ದೇವೇಗೌಡ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಡಾ.ಆದರ್ಶ,ಕುಣಿಗಲ್ ಬಿಜೆಪಿ ಮುಖಂಡರಾದ ಶ್ರೀ ಬಲರಾಮ್,ಹರ್ಷವರ್ಧನ್ ಗೌಡ,ಸೆರಿದಂತೆ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ಧರು @publicnewskunigal