ರಾಜ್ಯ ಹೆದ್ದಾರಿ 33 ರಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮರ ಮುರಿದು ಬಿದ್ದು ಹೆಣ್ಣು ನೊಡಲು ಹೊಗುತ್ತಿದ್ದ ಇಬ್ಬರಿಗೆ ಗಂಭೀರ ಗಾಯ!
ಕುಣಿಗಲ್ ತಾಲ್ಲೂಕಿನ ರಾಜ್ಯಹೆದ್ದಾರಿ 33ರ ಕೆಂಬಾರೆಪಾಳ್ಯ ಗ್ರಾಮದ ಬಳಿ ಹುಲಿಯೂರುದುರ್ಗದ ಕಡೆಯಿಂದ ಸಂತೆಮೂವತ್ತೂರು ಗ್ರಾಮಕ್ಕೆ ತೆರಳುವ ವೇಳೆ ರಸ್ತೆ ಬದಿಯಲ್ಲಿದ್ದ ಮರ ಮುರಿದು ಬಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರು ಘಟನೆ ಬುಧವಾರ ನಡೆದಿದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಕ್ಕಳಲೆ ರುದ್ರೆಗೌಡನ ಕೊಪ್ಪಲು ಗ್ರಾಮದ ಹೇಮಗಿರಿಗೌಡ(63) ಹಾಗೂ ಅಣ್ಣನ ಮಗನಾದ ರಾಮಕೃಷ್ಣ (30) ಗಂಭೀರವಾಗಿ ಗಾಯಗೊಂಡವರು ಬುಧವಾರ ಬೆಕ್ಕಳಲೆ ಗ್ರಾಮದಿಂದ ರಾಜ್ಯ ಹೆದ್ದಾರಿ 33ರ ಮಾರ್ಗವಾಗಿ ಸಂತೆಮಾವತ್ತೂರಿಗೆ ಅಣ್ಣನ ಮಗನಿಗ ರಾಮಕೃಷ್ಣ ರವರಿಗೆ ಹೆಣ್ಣು ನೊಡಲು ತೆರಳುವ ವೇಳೆ ಕೆಂಬಾರೆಪಾಳ್ಯ ಗ್ರಾಮದ ಬಳಿ ರಸ್ತೆಯ ಬದಿಯಲ್ಲಿದ್ದ ಮರ ಏಕಾ ಏಕಿ ಬುಡ ಸಹಿತ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದವರ ಮೇಲೆ ಬಿದ್ದು ಅವಘಡ ಸಂಭವಿಸಿದೆ ಮರ ಬಿದ್ದ ರಬಸಕ್ಕೆ ಬೈಕ್ ಜಕಂ ಗೊಂಡಿದೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ಸಿಬ್ಬಂದಿವರ್ಗ ಗಾಯಗೊಂಡಿದ್ದ ಇಬ್ಬರನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಬೆಂಗಳೂರಿಗೆ ಕರೆದೊಯಿದ್ದಿದ್ದಾರೆ ಎಂದು ತಿಳಿದು ಬಂದಿದೆ @publicnewskunigal