ರಜಾದಿನ ಕಳೆಯಲು ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ಶಿಂಷಾನದಿಯಲ್ಲಿ ಮಳುಗಿ ಆರು ಮಂದಿ ಸಾವು ಇಬ್ಬರ ಮೃತದೇಹ ಪತ್ತೆ ಉಳಿದವರಿಗಾಗಿ ಮುಂದುವರಿದ ಶೋಧ ಕಾರ್ಯ!
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ಸಮೀಪದ ಶಿಂಷಾನದಿಯಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ ತುಮಕೂರು ಬಿ.ಜಿ ಪಾಳ್ಯ ಹಾಗೂ ಶಿರಾ ತಾಲ್ಲೂಕಿನಿಂದ ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ರಜಾ ದಿನ ಕಳೆಯಲು ಬಂದಿದ್ದ ವೇಳೆ ಎಲ್ಲರೂ ಸೇರಿ ಮಾರ್ಕೋನಹಳ್ಳಿ ಜಲಾಶಯಕ್ಕೆ ಬೇಟಿ ನೀಡಿದ್ದಾರೆ ಬಳಿಕ
ಜಲಾಶಯದ ಕೊಡಿ ಹರಿದು ಹೊಗುವ ಶಿಂಷಾನದಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದ್ದ ಕಾರಣ ನೀರಿನಲ್ಲಿ ಆಟವಾಡಲು ನದಿಗೆ ಇಳಿದಿದ್ದಾರೆ ಈ ವೇಳೆ ಮಕ್ಕಳು ಮತ್ತು ಮಹಿಳೆಯರು ಆಟವಾಡುತ್ತಿದ್ದ ವೇಳೆ ನೀರಿನ ಪ್ರಮಾಣ ಹೆಚ್ಚಾಗಿದ್ದು ಏಳು ಮಂದಿ ನೀರಿನಲ್ಲಿ ಕೊಚ್ಚಿ ಹೊಗಿದ್ದಾರೆ (22) ವರ್ಷದ ನವಾಜ್ ಜಿವಂತವಾಗಿ ಪತ್ತೆಯಾಗಿದ್ದು ಉಳಿದಂತೆ ಶಾಜಿಯಾ(25) ಆರ್ಬಿನ್ (30) ಮೃತದೇಹಗಳು ಪತ್ತೆಯಾಗಿದ್ದು ಇನ್ನೂಳಿದ ತಬಸಮ್ (42) ಶಬಾನಾ (44) ಮಿಫ್ರಾ (4) ಮಹಿಬ್ (1) ನಾಲ್ಕುಮಂದಿ ನೀರಿನಲ್ಲಿ ನಾಪತ್ತೆಯಾಗಿದ್ದು ಸಂಜೆ ಏಳು ಗಂಟೆಯವರೆಗೆ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ನೀರಿನ ಹರಿವು ಹೆಚ್ಚಳವಾದ ಕಾರಣ ಶೋಧ ಕಾರ್ಯ ಸ್ಥಗಿತಗೋಳಿಸಿದ್ದಾರೆ ಸ್ಥಳದಲ್ಲಿ ತುಮಕೂರು ಎಸ್ಪಿ ಕೆ.ವಿ ಅಶೋಕ್ ಎಎಸ್ಪಿ ಪುರುಷೋತ್ತಮ್ ಹಾಗೂ ಗೋಪಾಲ್ ಕುಣಿಗಲ್ ಡಿವೈಎಸ್ಪ ಓಂಪ್ರಕಾಶ್.ಅಮೃತೂರು ಪಿಎಸ್ಐ ಶಮಂತ್‌ಗೌಡ ಸ್ಥಳದಲ್ಲಿ ಇದ್ದು ಕಾರ್ಯಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ
ಗೊಂದಲವಾದ ರಕ್ಷಣಾ ಕಾರ್ಯ ಘಟನೆ ನಡೆದ ಸ್ಥಳ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುತ್ತದೆ ಆದೆ ಸ್ಥಳಕ್ಕೆ ಬಂದ ನಾಗಮಂಗಲ ಗ್ರಾಮಂತರ ಠಾಣೆಯ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಾಪಸ್ ತೆರಳಿದ್ದಾರೆ ಆದರೆ ಅಮೃತೂರು ಪೊಲೀಸರು ಸ್ಥಳದಲ್ಲೆ ಬಿಡುಬಿಟ್ಟು ರಕ್ಷಣಾ ಕಾರ್ಯದಲ್ಲಿ ತೋಡಗಿದ್ದಾರೆ ರಕ್ಷಣ ಕಾರ್ಯ ಸ್ಥಗಿತಗೊಂಡ ಬಳಿಕ ಘಟನಾ ಸ್ಥಳಕ್ಕೆ ಬಂದ ನಾಗಮಂಗಲ ಗ್ರಾಮಂತರ ಪೊಲೀಸರಿಗೆ ತುಮಕೂರಿನ ಎಸ್ಪಿ ಅಶೋಕ್ ತರಾಟೆ ತೆಗೆದುಕೊಂಡ ಘಟನೆ ನಡೆಯಿತು ಕಾರ್ಯ ವ್ಯಾಪ್ತಿ ಯಾರದ್ದಾದರೆನು ಕರ್ತವ್ಯ ಮುಖ್ಯ ಗಡಿ ಭಾಗದಲ್ಲಿ ನಾವು ತಾವು ಎನ್ನುವ ವಿಚಾರ ಬರಬಾರದು ನಾಗರೀಕರ ರಕ್ಷಣೆ ಮುಖ್ಯ ಎಂದು ನಾಗಮಂಗಲ ಪೊಲೀಸರಿಗೆ ಕರ್ತವ್ಯದ ಬಗ್ಗೆ ನೆನಪಿಸಿದ ಪ್ರಸಂಗ ಜರುಗಿತು
ಬುಧವಾರ ಬೆಳಗ್ಗೆ ಏಳು ಗಂಟೆಯಿಂದ ಮತ್ತೆ ಉಳಿದವರ ಶೋಧಕಾರ್ಯ ಮುಂದವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಪತ್ತೆಯಾದ ಮೃತದೇಹಗಳನ್ನು ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನಿಡಲಾಗಿದೆ ಎಂದು ತಿಳಿದುಬಂದಿದೆ ಘಟನೆ ಸಂಬಂಧ ನಾಗಮಂಗಲ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal