ಪಟ್ಟಣದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ವಿಫಲ!
ಕುಣಿಗಲ್ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಇತ್ತಿಚೇಗೆ ಬೀದಿ ನಾಯಿಗಳ ಕಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ ಪಟ್ಟಣದ ಒಂಭತ್ತನೆ ವಾರ್ಡ್ ನ ರಮಣಬ್ಲಾಕ್ ನಲ್ಲಿ ಮಹಿಳೆಯೊಬ್ಬರನ್ನು ಬೀದಿ ನಾಯಿಗಳು ಅಟ್ಟಾಡಿಸುತ್ತಿರುವ ದೃಶ್ಯ ಸಿ.ಸಿ ಕ್ಯಾಮರದಲ್ಲಿ ಸೇರೆ ಯಾಗಿದೆ ಘಟನೆ ಬಗ್ಗೆ ಪುರಸಭೆಯ ಸದಸ್ಯ ಕೃಷ್ಣ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕರೆ ಮಾಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ ಪದೆ ಪದೆ ಇಂತಹ ಘಟನೆಗಳು ಪಟ್ಟಣದಲ್ಲಿ ಮರುಕಳಿಸುತ್ತಿದ್ದರು ಸಹ ಪುರಸಭೆಯ ಅಧಿಕಾರಿಗಳು ಕ್ರಮ ವಹಿಸುವಲ್ಲಿ ವಿಫಲರಾಗಿದ್ದಾರೆ ಪಟ್ಟಣದ ಮಾಂಸದ
ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ ಪಟ್ಟಣದ ಸುತ್ತಲು ಹಾಕುತ್ತಿರುವ ಕಾರಣದಿಂದ ಬೀದಿನಾಯಿಗಳು ಆಹಾರಕ್ಕಾಗಿ ಮಾಂಸದ ಅಂಗಡಿಯ ತ್ಯಾಜ್ಯ ತಿನ್ನುವ ಕಾರಣ ಪಟ್ಟಣದಲ್ಲಿ ಆಹಾರ ಸಿಗದಿದ್ದ ವೇಳೆ ಗುಂಪು ಗುಂಪಾಗಿ ಬರುವ ನಾಯಿಗಳ ಹಿಂಡು ಮಹಿಳೆಯರು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ ಈ ಬಗ್ಗೆ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಕೃಷ್ಣ ಹಾಗೂ ಪರಿಸರ ಇಂಜಿನಿಯರ್ ಚಂದ್ರಶೇಖರ್ ರವರಿಗೆ ವಿಚಾರಿಸಿದರೆ ಬೀದಿನಾಯಿ ದಾಳಿಯ ಬಗ್ಗೆ ನಮಗೆ ಯಾವುದೆ ದೂರು ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದು ಬೀದಿನಾಯಿಗಳ ದಾಳಿಯಿಂದ ಪ್ರಾಣ ಹಾನಿ ಸಂಭವಿಸುವ ಮುನ್ನ ಸ್ಥಳಿಯ ಶಾಸಕರು ಹಾಗೂ ಅಧಿಕಾರಿಗಳು ಪಟ್ಟಣದಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹವಾಗಿದೆ @publicnewskunigal