ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿ ಅಧ್ಯಕ್ಷ ಐ,ಎ, ವಿಶ್ವನಾಥ್!
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಐ.ಎ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನ ಸಭೆ ಜರುಗಿತು ಸಭೆಯಲ್ಲಿ ಅನ್ನಭಾಗ್ಯ,ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವ ನಿಧಿ, ಗೃಹಜೋತಿ, ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಇತ್ತಿಚೇಗೆ ತಾಲ್ಲೂಕಿನಲ್ಲಿ ತೆರಿಗೆ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ 1069 ಪಡಿತರ ಚೀಟಿಗಳು ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾವಣೆ ಯಾಗಿವೆ ಹಾಗೂ ಹೊಸ ಪಡಿತರ ಚೀಟಿಗಾಗಿ 689 ಮಂದಿ ಅರ್ಜಿಸಲ್ಲಿಸಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೆದಾರ್ ಹರ್ಷ ಮಾಹಿತಿ ನೀಡಿದರು ಈ ವೇಳೆ ಸಮಿತಿಯ
ಉಪಾಧ್ಯಕ್ಷ ಹೊನ್ನಪ್ಪ ಮಾತನಾಡಿ ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ ಮಾಡುವ ಸಂದರ್ಭದಲ್ಲಿ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಮನಬಂದತೆ ಹಣ ವಸೂಲಿ ಮಾಡುತ್ತಿದ್ದಾರೆ ಸರ್ಕಾರಿ ಶುಲ್ಕ 25 ರೂಪಾಯಿ ಇದ್ದರು ಸಹ ಸಾರ್ವಜನಿಕರಿಂದ 200 ರಿಂದ 500 ರೂಪಾಯಿ ವಸೂಲಿ ಮಾಡುತ್ತಿರುವುದು ಕಂಡುಬಂದಿದ್ದು ಸೂಕ್ತ ಕ್ರಮ ವಹಿಸಲು ಸಭೆಯಲ್ಲಿ ಅಧ್ಯಕ್ಷರಿಗೆ ಮನವಿ ಮಾಡಿದರು ಈ ವೇಳೆ ಮಾತನಾಡಿದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ಈ ರೀತಿಯ ಪ್ರಕರಣಗಳು ಕಂಡುಬಂದರೆ ಅಂತಹ ಕೇಂದ್ರಗಳನ್ನು ಗುರುತಿಸಿ ಪರವಾನಿಗೆ ರದ್ದು ಪಡಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಆಹಾರ ಇಲಾಖೆಯ ಶಿರಸ್ತೆದಾರ್ ಹರ್ಷ ರವರಿಗೆ ಸಭೆಯಲ್ಲಿ ಸೂಚಿಸಿದರು ಅಂಚೆಪಾಳ್ಯ ಕೈಗಾರಿಕಾ
ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಗಳ ಬಸ್ ಗಳನ್ನು ನಿಲುಗಡೆ ಮಾಡುವಂತೆ ಸಚಿವರಿಂದ ಆದೇಶ ಇದ್ದರು ಸಹ ಯಾವುದೆ ಸರ್ಕಾರಿ ಬಸ್ ಗಳನ್ನು ನಿಲ್ಲಿಸುತ್ತಿಲ್ಲ ಎಂದು ಉಪಾಧ್ಯಕ್ಷ ಹನುಮಂತ ಪ್ರಶ್ನಿಸಿದರು ಈ ವೇಳೆ ಸಂಚಾರ ನಿಯಂತ್ರಿಕರು ಮಾತನಾಡಿ ಬೆಂಗಳೂರಿನಿಂದ ಹೊರಡುವ ಕೆಲವೊಂದು ಬಸ್ಗಳನ್ನು ಹೊರತು ಪಡಿಸಿ ಎಲ್ಲ ಬಸ್ ಗಳನ್ನು ನಿಲ್ಲಿಸುವಂತೆ ಸರ್ಕಾರದಿಂದ ಆದೇಶ ಆಗಿದೆ ಈ ಸಂಬಂಧ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ತಾಕಿತು ಮಾಡುತ್ತೇನೆ ಎಂದು ಉತ್ತರಿಸಿದರು ಸಭೆಯಲ್ಲಿ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡುವಂತೆ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಸೂಚಿಸಿದರು ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್,ವಿ ವಸಂತ್ ಕುಮಾರ್,ಹಾಗೂ ಪಂಚ ಗ್ಯಾರಂಟಿಗಳ ಉಪಾಧ್ಯಕ್ಷರುಗಳು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು @publicnewskunigal