ಶಿಂಷಾನದಿಯಲ್ಲಿ ಶಾಸಕ ಡಾ.ರಂಗನಾಥ್ ನೆತೃತ್ವದಲ್ಲಿ ಮುಂದುವರಿದ ಶೋಧ ಕಾರ್ಯ ಮೂರುತಾಲ್ಲೂಕಿನ ಅಗ್ನಿಶಾಮಕ ತಂಡ ಭಾಗಿ!
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ಶಿಂಷಾನದಿಯಲ್ಲಿ ಕಳೆದವಾರ ಪ್ರವಾಸಕ್ಕೆ ಬಂದು ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಜಲಾಶಯದಿಂದ ಹೊರ ಹರಿವು ಹೆಚ್ಟಿದ ಕಾರಣ ಮಹಿಳೆಯರು ಮಕ್ಕಳು ಸೇರಿದಂತೆ ಏಳು ಮಂದಿ ನೀರಿನಲ್ಲಿ ಕೊಚ್ಚಿ ಹೊಗಿದ್ದರು ನಾಲ್ಕು ದಿನಗಳ ವರೆಗೆ ನಡೆದ ಕಾರ್ಯಚರಣೆಯಲ್ಲಿ ಐದು ಮಂದಿಯ ಶವ ಪತ್ತೆಯಾಗಿತ್ತು ಆದರೆ ಒಂದು ವರ್ಷದ ಮಗುವಿನ ಕಳೆಬರಹ ಪತ್ತೆಯಾಗಿರಲಿಲ್ಲ ಕಳೆದ ಎಂಟು ದಿನಗಳಿಂದ ಮಗುವಿನ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸ್ಥಳಿಯ ಪೊಲೀಸರು ಹಾಗೂ ಮೃತರ ಸಂಬಂಧಿಕರು ಹುಡುಕಾಟ ನಡೆಸಿದರು ಕೂಡ ಮೃತದೇಹ ಪತ್ತೆಯಾಗದ ಕಾರಣ ಮಂಗಳವಾರ ಶಾಸಕ ಡಾ.ರಂಗನಾಥ್ ನೆತೃತ್ವದಲ್ಲಿ ಕುಣಿಗಲ್,ಪಾಂಡವಪುರ, ನಾಗಮಂಗಲ ತಾಲ್ಲೂಕಿನ ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಶಾಸಕ ಡಾ.ರಂಗನಾಥ್ ಹರಿಯುವ ನದಿಯಲ್ಲಿ ಪವರ್ ಬೋಟ್ ಮೂಲಕ ಸುಮಾರು ಎಂಟು ಕಿಲೋಮೀಟರ್ ನಷ್ಟು ನದಿಯಲ್ಲಿ ಒಡಾಟ ನಡೆಸಿ ಮಗುವಿನ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದರು ಬೆಳಗ್ಗೆಯಿಂದ ಸಂಜೆ ನಾಲ್ಕು ಗಂಟೆಯ ವರೆಗೆ ಕಾರ್ಯಚರಣೆ ನಡೆಸಲಾಯಿತು ಬಳಿಕ ಶಾಸಕ ಡಾ.ರಂಗನಾಥ್ ಮಾತನಾಡಿ ಸಾರ್ವಜನಿಕರ ಅಜಾಗರುಕತೆಯ ಕಾರಣದಿಂದ ಅಹಿತಕರ ಘಟನೆ ಸಂಭವಿಸಿದ್ದು ಮಂದಿನ ದಿನಗಳಲ್ಲಿ ಈ ರೀತಿಯ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಮುಂಜಾಗ್ರತ ಕ್ರಮ ವಹಿಸಲು ಸೂಚಿಸಿದ್ದೆನೆ ಹಾಗೂ ಎಚ್ಚರಿಕೆಯ ನಾಮ ಫಲಕಗಳನ್ನು ಅಳವಡಿಸಲಾಗಿದೆ ಮಾರ್ಕೋನಹಳ್ಳಿ ಜಲಾಶಯಕ್ಕೆ ಬೇಟಿ ನೀಡುವ ಪ್ರವಾಸಿಗರು ಎಚ್ಚರಿಕೆಯಿಂದ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಜಲಾಶಯದ ವಿಕ್ಷಣೆ ನಡೆಸಿ ಏಷ್ಯಾದಲ್ಲೆ ಗುರುತ್ವಾಕರ್ಷಣೆ ಮೂಲಕ ಜಲಾಶಯದಿಂದ ನೀರನ್ನು ಹೊರ ಹಾಕುವ ಏಕೈಕ ಜಲಾಶಯ ಇದಾಗಿದೆ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ ವೇಳೆ ಸೈಪನ್ ಗಳ ಮೂಲ ನೀರು ಹೊರ ಹೊಗುತ್ತದೆ ಹೊಳ ಹರಿವು ಹೆಚ್ಚಾದಗ ಈ ರೀತಿ ಜಲಾಶಯದಿಂದ ನೀರು ನದಿಗೆ ಹರಿಯುತ್ತದೆ ಪ್ರವಾಸಕ್ಕೆ ಬರುವವರು ಹೆಚ್ಚರಿಕೆಯಿಂದ ಇರಲು ಶಾಸಕರು ಮನವಿ ಮಾಡಿದರು ಈ ವೇಳೆ ಸ್ಥಳಿಯ ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸ್ಥಳಿಯರು ಮೃತರ ಸಂಬಂಧಿಕರು ಉಪಸ್ಥಿತರಿದ್ದರು @publicnewskunigal