ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ವೀಣಾ ಪದ್ಮರಾಜ್ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಉಮೇಶ್ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ
ರಾಜಗೆರೆ ಗ್ರಾಮದ ವೀಣಾ ಪದ್ಮರಾಜ್ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಈ ವೇಳೆ ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್ ಕರ್ತವ್ಯ ನಿರ್ವಹಿಸಿದರು ಈ ವೇಳೆ ಉಪಾಧ್ಯಕ್ಷೆ ಶಶಿಕಲಾ ಪಿಡಿಒ ರಾಜಶೇಖರ್, ಸದಸ್ಯರಾದ ಹುಚ್ಚೆಗೌಡ,ಉಮೇಶ್,ಕುಮಾರ್, ರಮೇಶ್,ರಂಗಮ್ಮ, ವಿಜಯಗೌರಮ್ಮ,ಕುಮಾರ್.ಸಿ, ರಂಗಪ್ಪ, ಕಾಂಗ್ರೆಸ್ ಮುಖಂಡರಾದ ಬೋರೆಗೌಡ,ಕೋಘಟ್ಟ ರಾಜಣ್ಣ ಹಾಲುವಾಗಿಲು ಸ್ವಾಮಿ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು @publicnewskunigal