ಹುಲಿಯೂರುದುರ್ಗ ಪಟ್ಟಣದಲ್ಲಿ ಪಾದಚಾರಿ ಮಾರ್ಗದ ರಸ್ತೆ ಒತ್ತುವರಿ ತೆರವಿಗೆ ಮುಂದಾದ ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಟಿ.ಎಮ್ ಸರ್ಕಲ್ ನಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಸುವ ಕಾರಣದಿಂದ ಹುಲಿಯೂರುದುರ್ಗ ಪೊಲೀಸರು ಹಾಗೂ ಗ್ರಾಮ ಪಂಚಾಯ್ತಿ ವತಿಯಿಂದ ಪಾದಚಾರಿ ಮಾರ್ಗದ ರಸ್ತೆಯ ಒತ್ತುವರಿ ತೆರವು ಮಾಡಲು ಮುಂದಾಗಿದ್ದು ಶುಕ್ರವಾರ ಬೆಳಗ್ಗೆ ಪಟ್ಟಣದ ಹಳೆವೂರು ರಸ್ತೆ ಕೋಡವತ್ತಿ ರಸ್ತೆ ಹಾಗೂ ಮದ್ದೂರು ರಸ್ತೆಯ ಎರಡು ಬದಿಯಲ್ಲಿ ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿ ಮಳಿಗೆಯ ಮಾಲೀಕರಿಗೆ ಹಾಗೂ ತರಕಾರಿ ಹೂ ಮಾರಟ ಮತ್ತು ರಸ್ತೆ ಬದಿಯಲ್ಲಿರುವ ಪೆಟ್ಟಿ ಅಂಗಡಿ ಮಾಲೀಕರಿಗೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಅಧಿಕಾರಿಗಳು ತಿಳುವಳಿಕೆ
ನೀಡಿದರು ದಿನೆ ದಿನೆ ಪಟ್ಟಣ ಬೆಳೆಯುತ್ತಿದ್ದು ಸಂಚಾರ ದಟ್ಟಣೆ ಹೆಚ್ಚಾಗಿದೆ ಹಳೆವೂರು ಮತ್ತು ಕೋಡವತ್ತಿ ರಸ್ತೆಗಳಲ್ಲಿ ಮಾಂಸದ ಅಂಗಡಿ ಹಾಗೂ ಬೇಕರಿ ದಿನಸಿ ಅಂಗಡಿಯವರು ರಸ್ತೆ ಅತಿಕ್ರಮಿಸಿ ರಸ್ತೆಗೆ ಅಕ್ರಮವಾಗಿ ಸಿಟ್ ಅಳವಡಿಸಿ ರಸ್ತೆ ಒತ್ತುವರಿ ಮಾಡಿದ್ದು ಮದ್ದೂರು ರಸ್ತೆಯಲ್ಲಿ ರಸ್ತೆಯಲ್ಲೆ ಆಟೋ ನಿಲ್ದಾಣ ನಿರ್ಮಿಸಿದ್ದು ಹಾಗೂ ತರಕಾರಿ ಅಂಗಡಿಗಳನ್ನು ಇಡಲಾಗಿದೆ ಇದರಿಂದ ನಿತ್ಯ ವಾಹನ ಸಂಚರಕ್ಕೆ ಸಮಸ್ಯೆಯಾಗಿದೆ ಸಂಚಾರ ದಟ್ಟಣೆ ನಿಯಂತ್ರಿಸಲು ಅಪಘಾತ ತಡೆಯಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಒತ್ತುವರಿ ತೆರವಿಗೆ ಮುಂದಾಗಿದ್ದು ಎಲ್ಲರು ಸಹಕರಿಸುವಂತೆ ವೃತ್ತ ನಿರೀಕ್ಷಕ ಎಸ್.ಬಿ ನವೀನ್‌ಗೌಡ ತಿಳಿಸಿದರು ಇದೆ ರೀತಿ ಮುಂದುವರಿದರೆ ಪೆಟ್ಟಿಗೆ ಅಂಗಡಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ತಿಳಿಸಿದರು ಈ ವೇಳೆ ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ವಿ.ಎಸ್.ಎಸ್.ಎನ್ ಅಧ್ಯಕ್ಷ ಮಧುಸೂದನ್,ಗ್ರಾಮ ಪಂಚಾಯಿತಿ ಸದಸ್ಯರಾದ ನಟರಾಜು, ಅಲ್ಲಾಭಕಾಷ್,ನಾಗೇಶ್,ಮಂಜುನಾಥ್ ಪಿಡಿಒ ಶ್ರೀಧರ್ ಉಪಸ್ಥಿತರಿದ್ದರು @publicnewskunigal